ಆನೆ ಹಿಂಡಿನ ನಡುವೆ ಕುರಿ–ಮೇಕೆ!

‘ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ’ಯು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು. ಈ ಪ್ರತಿಭಟನೆಯಲ್ಲಿ ಅಲೆಮಾರಿಗಳು ವಿವಿಧ ವೇಷಗಳನ್ನು ಧರಿಸಿ ವೇದಿಕೆಯ ಮುಂಭಾಗ ಕುಳಿತಿದ್ದರು. ಅವರನ್ನು ನೋಡಿದ ನಮಗೆ ಕರುಳು ಹಿಂಡಿದಂತಾಯಿತು. ಸರ್ಕಾರ ಅಸ್ಪೃಶ್ಯ ಅಲೆಮಾರಿ ಜಾತಿಗಳನ್ನು ಸ್ಪೃಶ್ಯ ‘ಸಿ’ ಗುಂಪಿಗೆ ಸೇರಿಸಿ, ಘೋರ ಅನ್ಯಾಯವೆಸಗಿದೆ. ಆನೆ ಹಿಂಡುಗಳ ಮಧ್ಯೆ ಕುರಿ–ಮೇಕೆ ಮರಿಗಳನ್ನು ಬಿಟ್ಟಂತಾಗಿದೆ. ಸಾಮಾಜಿಕ ನ್ಯಾಯದ ಪಾಠ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಬ್ಬಲಿ ಸಮುದಾಯಗಳನ್ನು ಮೂರನೇ ಗುಂಪಿಗೆ ಸೇರಿಸಿ ಪ್ರಮಾದವೆಸಗಿದ್ದಾರೆ. ಸರ್ಕಾರಿ ಕ್ಷೇತ್ರದಲ್ಲಿ ಯಾವುದೇ ಪ್ರಾತಿನಿಧ್ಯವಿಲ್ಲದೆ ವಂಚಿತವಾಗಿರುವ ಈ ಅಸ್ಪೃಶ್ಯ ಅಲೆಮಾರಿಗಳನ್ನು ‘ಸಿ’ ಗುಂಪಿನಿಂದ ಪ್ರತ್ಯೇಕಿಸಿ,
ಶೇ 1ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಕೋರುತ್ತೇವೆ.

⇒ಸುಬ್ಬು ಹೊಲೆಯಾರ್, ಕೃಷ್ಣದಾಸ್, ಬೆಂಗಳೂರು

ಎಲ್ಲೆಡೆ ‘ಜಾತಿ ಅಸ್ಮಿತೆ’ಯ ಮೋಹ

19ನೇ ಶತಮಾನದ ಈಚೆಗೆ ಎಲ್ಲಾ ‘ಜಾತಿ ವಿಮೋಚನಾ’ ಹೋರಾಟಗಳನ್ನು ‘ಜಾತಿ ಹೋರಾಟ’ಗಳಾಗಿ ಪರಿವರ್ತಿಸಿದ್ದು, ಆಳುವ ವರ್ಗಕ್ಕೆ ದಕ್ಕಿದ ದೊಡ್ಡ ಯಶಸ್ಸು. ವರ್ತಮಾನದ ಜಾತಿ ವಿಮೋಚನೆ ಹೆಸರಿನ ಹೋರಾಟಗಳು ಆಳದಲ್ಲಿ ಜಾತಿಪರ ಹೋರಾಟಗಳಾಗಿ ಬದಲಾಗಿವೆ. ಹಾಗಾಗಿಯೇ, ತಮ್ಮ ‘ಜಾತಿಗಳ ಅಸ್ಮಿತೆ’ಯನ್ನು ಗಟ್ಟಿಯಾಗಿ ಪ್ರತಿಪಾದಿಸುವುದು ಬಹುತೇಕ ಹೋರಾಟಗಳ ಪ್ರಮುಖ ಲಕ್ಷಣವಾಗಿ ಬದಲಾಗಿದೆ. ಮೇಲ್ಜಾತಿಗಳಲ್ಲಿದ್ದ ಈ ‘ಜಾತಿ ಅಸ್ಮಿತೆ’ಯ ಮೋಹ (ಅದಕ್ಕೆ ಕಾರಣ ಆರ್ಥಿಕ ಮತ್ತು ಸಾಮಾಜಿಕ ಸಂಪನ್ಮೂಲಗಳ ಮೇಲಿನ ಹಿಡಿತ) ಪ್ರಸ್ತುತ ಯಾವ ಸಂಪನ್ಮೂಲಗಳ ಆಸರೆಯೇ ಇಲ್ಲದ ಅಂಚಿನ ಸಮುದಾಯಗಳಿಗೂ ಹಬ್ಬುತ್ತಿದೆ. ‘ಮೀಸಲಾತಿಯ ಆಶಯ ಜಾತಿ ವಿನಾಶವೇ ಹೊರತು ಹೊಸ ಜಾತಿ ಅಸ್ಮಿತೆಗಳ ಸೃಷ್ಟಿಯಲ್ಲ’ ಅನ್ನುವ ವಿವೇಕ ನಮ್ಮ ನಡುವೆ ಇಲ್ಲದಾಗಿದೆ.

⇒ಕಿರಣ್ ಎಂ. ಗಾಜನೂರು, ಕಲಬುರಗಿ

ಬಿ‘ಯಮ’ಟಿಸಿ ಎಂಬುದೇ ಸರಿ

ಜುಲೈ 10ರಿಂದ ಆಗಸ್ಟ್ 20ರ ವರೆಗೆ ಬಿಎಂಟಿಸಿ ಬಸ್ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ (ಪ್ರ.ವಾ., ಆಗಸ್ಟ್ 21). ಈ ಸುದ್ದಿ ಓದುತ್ತಿದ್ದಾಗಲೇ ‘ಬಿಎಂಟಿಸಿಗೆ ವಿದ್ಯಾರ್ಥಿನಿ ಬಲಿ’ ಎಂಬ ಸುದ್ದಿ ಕನ್ನಡದ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುತ್ತಿತ್ತು. ಅಂದರೆ, ಆಗಸ್ಟ್ 21ಕ್ಕೆ 8 ಜನ ಬಲಿಯಾದಂತೆ ಆಯಿತು. ಈ ಸಂಸ್ಥೆಗೆ ‘ಬಿ ಯಮ ಟಿಸಿ’ ಎಂಬುದೇ ಸರಿ ಅನ್ನಿಸುತ್ತೆ. ಬಿಎಂಟಿಸಿ ನೌಕರರು ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ₹1 ಕೋಟಿ ವಿಮಾ ಪರಿಹಾರದ ಸೌಲಭ್ಯವಿದೆ. ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮೃತರಾಗುವವರ ಸಂತ್ರಸ್ತ ಕುಟುಂಬಗಳಿಗೆ ಸಂಸ್ಥೆಯಿಂದ ₹1 ಕೋಟಿ ಪರಿಹಾರ ನೀಡುವ ಆದೇಶವನ್ನು ಜಾರಿಗೊಳಿಸಬೇಕು.

ವಿ. ಪಾಂಡುರಂಗಪ್ಪ, ಬೆಂಗಳೂರು

ಜನನಾಯಕರ ಅನರ್ಥ ಸಂದೇಶ

‘ಸಿ.ಎಂ ಕಟೌಟ್ಗೆ ಹಾಲಿನ ಅಭಿಷೇಕ’ ಸುದ್ದಿ ಓದಿ ಬೇಸರವಾಯಿತು. ಸಿ.ಎಂ ಅಧಿಕೃತ ನಿವಾಸ ‘ಕಾವೇರಿ’ ಮುಂಭಾಗದಲ್ಲಿ ಈ ಕಾರ್ಯಕ್ರಮ ಮಾಡಿದ್ದು ಮಾಜಿ ಸಚಿವರು. ಜನನಾಯಕರು ಇಂತಹ ಉಪಯೋಗವಿಲ್ಲದ ಹಾಗೂ ಹಾಲಿನ ದುರ್ಬಳಕೆ ಮಾಡಿ ಸಮಾಜಕ್ಕೆ ನೀಡುವ ಸಂದೇಶವಾದರೂ ಏನಿದೆ?

⇒ಕಡೂರು ಫಣಿಶಂಕರ್, ಬೆಂಗಳೂರು

ಬಡವರಿಗೆ ಉಡುಗೊರೆ ನೀಡಬಹುದಲ್ಲವೇ?

ಜೆಡಿಎಸ್ ಸದಸ್ಯ ಹಾಗೂ ಬಂಗಾರದ ಅಂಗಡಿಗಳ ಮಾಲೀಕ ಟಿ.ಎ. ಶರವಣ ಅವರು, ವಿಧಾನ ಪರಿಷತ್ತಿನ ಸದಸ್ಯರಿಗೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಈ ಹೊತ್ತಿನಲ್ಲಿ ಚಿನ್ನಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಉಡುಗೊರೆಯಾಗಿ ನೀಡಿದ್ದು ಸಂತೋಷ. ಆದರೆ, ಉಡುಗೊರೆಯನ್ನು ಸ್ವೀಕರಿಸಿದವರಾರೂ ಬಡವರಲ್ಲ; ಬಹುಕೋಟಿ ಒಡೆಯರು. ಅವರ ಬದಲಾಗಿ ಬಡಬಗ್ಗರಿಗೆ ಹಣದ ರೂಪದಲ್ಲಾಗಲಿ ಮತ್ಯಾವುದೋ ಬಗೆಯಲ್ಲಿ ಹಂಚಿದ್ದರೆ ಸ್ವಾತಂತ್ರ್ಯದ ಸಂಭ್ರಮಕ್ಕೆ ಮತ್ತಷ್ಟು ಕಳೆ ಬರುತ್ತಿತ್ತೆನೋ. ಆದರೂ, ಶರವಣ ಅವರ ಶ್ರೀಮಂತಿಕೆಯ ಕಳಕಳಿ ಕಳೆಗುಂದದಿರಲಿ!

⇒ಶಿವರಾಜ ಯತಗಲ್, ರಾಯಚೂರು

ರೈತರ ಮನೆಯಲ್ಲಿ ಸೂತಕದ ಛಾಯೆ

ಹವಾಮಾನ ವ್ಯೆಪರೀತ್ಯದಿಂದಾಗಿ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯು ರೈತಾಪಿ ವರ್ಗದ ಪಾಲಿಗೆ ಸಂಭ್ರಮ ಉಂಟು ಮಾಡಿಲ್ಲ. ಸಂಭ್ರಮದ ಬದಲಿಗೆ, ಅನ್ನದಾತರ ಬದುಕು ಅಸ್ತವ್ಯಸ್ತವಾಗಿದ್ದು, ಅವರ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ಸಂಕಟದ ಹೊತ್ತಿನಲ್ಲಿ ಸಂತ್ರಸ್ತ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಕಾರ್ಯವನ್ನು ಸರ್ಕಾರ ಚುರುಕುಗೊಳಿಸಬೇಕಿದೆ.

⇒ಉದಯ ಮ. ಯಂಡಿಗೇರಿ, ಧಾರವಾಡ

ಬೈಕ್ ಕಂಪನಿ: ಪ್ರಚೋದನೆಯ ತಂತ್ರ

ಇತ್ತೀಚೆಗೆ ದ್ವಿಚಕ್ರ ವಾಹನ ಕಂಪನಿಗಳು ತಮ್ಮ ವಾಹನದ ಜಾಹೀರಾತುಗಳಲ್ಲಿ ಯುವಜನರನ್ನು ಪ್ರಚೋದಿಸುವ ರೀತಿಯಲ್ಲಿ ಚಿತ್ರಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿದೆ. ಪೊಲೀಸ್ ಇಲಾಖೆಯು ವ್ಹೀಲಿ ಮಾಡುವವರ ಚಾಲನಾ ಪರವಾನಗಿ ರದ್ದುಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದೆ. ಯಾವುದೇ ಕಂಪನಿಯು ಪ್ರಚೋದನಕಾರಿ ಜಾಹೀರಾತು ಪ್ರಕಟಿಸದಂತೆ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಬೇಕಿದೆ.

⇒ಚನ್ನಬಸವ ಪುತ್ತೂರ್ಕರ, ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.