ಮಂಗಳವಾರ, ಜುಲೈ 27, 2021
27 °C

ಪಿಂಚಣಿ ಕಡಿತ ಸೂಕ್ತ ನಿರ್ಧಾರವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2012ರ ಏಪ್ರಿಲ್‌ 1ರಿಂದ 2015ರ ಡಿಸೆಂಬರ್‌ 31ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಪದವಿ ಕಾಲೇಜಿನ ಅಧ್ಯಾಪಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಾಲಯ ಅಧಿಕಾರಿಗಳ ಪಿಂಚಣಿ ಕಡಿತಗೊಳಿಸಲು ಸರ್ಕಾರ ಮುಂದಾಗಿರುವುದರಿಂದ, ಇಳಿವಯಸ್ಸಿನಲ್ಲಿ ನೆಮ್ಮದಿ ಜೀವನ ನಡೆಸಬೇಕಾಗಿದ್ದ ಅವರು ಆತಂಕಕ್ಕೆ ಒಳಗಾಗಿದ್ದಾರೆ.

ಸರ್ಕಾರದ ಆದೇಶದಂತೆ, ಬರುವ ಜುಲೈ ತಿಂಗಳ ಪಿಂಚಣಿಯು ಕನಿಷ್ಠ ಹನ್ನೆರಡೂವರೆ ಸಾವಿರ ರೂಪಾಯಿ ಕಡಿತಗೊಳ್ಳುವುದರಿಂದ, ನಿವೃತ್ತಿದಾರರು ಚಿಂತಾಕ್ರಾಂತರಾಗಿದ್ದಾರೆ. ಸರ್ಕಾರ ಒಂದು ಕಡೆ ಕಾಲ್ಪನಿಕ ಸೇವೆ ಎಂದು ಕಡಿಮೆ ಪಿಂಚಣಿ ನಿಗದಿಪಡಿಸಿ ಕೆಲವರಿಗೆ ತಾರತಮ್ಯ ಮಾಡಿದೆ. ಆ ಚಿಂತೆಯಲ್ಲಿ ಇರುವಾಗಲೇ ಅದೇ ಕಡಿಮೆ ಪಿಂಚಣಿಯಲ್ಲಿ ಮತ್ತೆ ಕಡಿತಗೊಳಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವೈಜ್ಞಾನಿಕವಾದ ಪಿಂಚಣಿ ಕಡಿತದ ಆದೇಶವನ್ನು ಹಿಂಪಡೆದು, ನಿವೃತ್ತಿದಾರರ ನೆಮ್ಮದಿಯ ಜೀವನಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಿ.

ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.