ಭಾನುವಾರ, ಸೆಪ್ಟೆಂಬರ್ 26, 2021
21 °C

ಪತ್ನಿಯ ಆಸೆ ಪೂರೈಸಲು ಬಾಡಿಗೆ ಹೆಲಿಕಾಪ್ಟರ್ | ದುಂದುವೆಚ್ಚವಲ್ಲ, ಮಾದರಿ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ನಿಯ ಆಸೆ ಪೂರೈಸಲು ಶಿಕ್ಷಕರೊಬ್ಬರು ಬಾಡಿಗೆ ಹೆಲಿಕಾಪ್ಟರ್ ಬಳಸಿ ಆಗಸಯಾನ ಮಾಡಿರುವುದನ್ನು ಪ್ರಶ್ನಿಸುತ್ತಾ, ಶಿಕ್ಷಕರು ಸರಳ ಜೀವನದ ಕ್ರಮದಲ್ಲಿ ಸಮಾಜಕ್ಕೆ ಮಾದರಿಯಾಗಿ ಇರಬೇಕೆಂದು ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ ಹೇಳಿದ್ದಾರೆ (ವಾ.ವಾ., ಸೆ. 6). ಸಂಗಾತಿಯ ಬಹುದಿನಗಳ ಬಯಕೆಯನ್ನು ತನ್ನ ಜೀವಮಾನದ ಗಳಿಕೆಯ ಅತಿದೊಡ್ಡ ಮೊತ್ತವನ್ನು ಬಳಸಿ ಈಡೇರಿಸಿರುವುದು ಪತ್ನಿಯ ಮೇಲಿನ ಪ್ರೀತಿಯನ್ನು ತೋರುತ್ತದೆ. ಅದನ್ನು ದುಂದುವೆಚ್ಚ ಎನ್ನಲಾಗದು. ಹಣ ಸಂಪಾದನೆ ಮಾಡುವ ಮೂಲ ಉದ್ದೇಶವೇ ದಿನನಿತ್ಯದ ಖರ್ಚುಗಳೂ ಸೇರಿದಂತೆ ತಮ್ಮತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವುದು ಆಗಿರುತ್ತದೆ. ಇಲ್ಲವಾದಲ್ಲಿ ಹಣ ಸಂಪಾದನೆಯ ಅವಶ್ಯಕತೆಯೇ ಇರುವುದಿಲ್ಲ.

ಕೇವಲ ಕಾಫಿ, ತಿಂಡಿ ಸೇವನೆಗೆ, ಮರೆತುಹೋದ ಕನ್ನಡಕ ತರಲು ಹೆಲಿಕಾಪ್ಟರುಗಳನ್ನು ಬಳಸಿದ ಮಂತ್ರಿಯನ್ನೂ ಮುಖ್ಯಮಂತ್ರಿಯನ್ನೂ ಕಂಡಿದ್ದೇವೆ. ಪತ್ನಿಯ ಆಸೆ ಈಡೇರಿಸಲು ಆತ ಮಾಡಿದ ಖರ್ಚು ಗಂಡಂದಿರಿಗೆಲ್ಲಾ ಮಾದರಿ ಎನ್ನಬಹುದು. ಅಷ್ಟಕ್ಕೂ ಆತ ವ್ಯಯಿಸಿದ್ದು ಆತನ ಸ್ವಯಾರ್ಜಿತ ಅಲ್ಲವೇ?

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು