ಮಂಗಳವಾರ, ಜನವರಿ 19, 2021
17 °C

ವಾಚಕರ ವಾಣಿ: ಇದೆಂಥಾ ಅಭಿವೃದ್ಧಿ ಸ್ವಾಮಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಅಭಿವೃದ್ಧಿಗೊಂಡ ರಸ್ತೆಗಳ ಮರು ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವ ಕುರಿತ ವರದಿ (ಪ್ರ.ವಾ., ಜ. 4) ವಿಸ್ಮಯವನ್ನು ಉಂಟುಮಾಡುತ್ತದೆ. ಹನ್ನೆರಡು ಕಾರಿಡಾರ್‌ಗಳ ಪ್ರಾರಂಭಿಕ ಹಂತದ ಅಭಿವೃದ್ಧಿಗೆ ₹ 335.17 ಕೋಟಿ, ಇವುಗಳ ನಿರ್ವಹಣೆಗೆ ವಾರ್ಷಿಕವಾಗಿ ₹ 142.12 ಕೋಟಿ ವೆಚ್ಚವಾಗಲಿದೆ! ಇದೆಂಥಾ ಅಭಿವೃದ್ಧಿ ಸ್ವಾಮಿ? ಚೆನ್ನಾಗಿರುವ ರಸ್ತೆಗಳಿಗೇ ಮತ್ತೆ ವೆಚ್ಚ ಮಾಡುವ ಅಗತ್ಯವೇನು ಎಂದು ಮಾಜಿ ಮೇಯರ್ ಒಬ್ಬರು ಪ್ರಶ್ನಿಸಿದ್ದಾರೆ.

ಸರ್ಕಾರದಲ್ಲಿ ಏನು ನಡೆಯುತ್ತಿದೆ? ಯಾಕೆ ‘ಆ ಏನು’ ನಡೆಯುತ್ತಿದೆ ಎನ್ನುವುದನ್ನು ಕೇಳುವವರು ಇಲ್ಲವೋ ಹೇಗೆ? ಚೆನ್ನಾಗಿ ಇರುವುದನ್ನು ಹಾಳುಮಾಡಿ ಅಭಿವೃದ್ಧಿ ನೆಪದಲ್ಲಿ ಕಾಮಗಾರಿಗೆ ಮುಂದಾಗುವುದು ಅದೆಂಥ ಆಡಳಿತ ವೈಖರಿಯೋ ಗೊತ್ತಾಗದು. ನಾಗರಿಕ ಸಂಸ್ಥೆಗಳು ಈ ಮರು ಅಭಿವೃದ್ಧಿಯ ಹಂಬಲವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಇಂಥವೆಲ್ಲ ಹಣದ ಅಪವ್ಯಯದ ಮಾದರಿಗಳು.

-ಸಾಮಗ ದತ್ತಾತ್ರಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು