‘ಸಂಸದೀಯ ನಡಾವಳಿಯ ಸಂರಕ್ಷಣೆ’ ಎಂಬ ಬರಗೂರು ರಾಮಚಂದ್ರಪ್ಪ ಅವರ ಲೇಖನ (ಪ್ರ.ವಾ., ಆ. 2) ಓದಿದೆ. ಸಾಮಾಜಿಕ ಜವಾಬ್ದಾರಿ ಹೊಂದಿದ ಲೇಖಕ ರಾಜಕೀಯ ಅರಿವನ್ನು ಹೊಂದಿರಬೇಕು. ಪ್ರಜಾಸತ್ತಾತ್ಮಕ ನಡೆಗಳು ತನ್ನ ಕಣ್ಣೆದುರೇ ಕುಸಿದು ಬಿದ್ದಾಗ ಅದನ್ನು ಸಂವಿಧಾನದ ಅಡಿ ಹೇಗೆ ರಕ್ಷಿಸಬೇಕು ಎಂಬ ಅರಿವನ್ನು ಈ ಲೇಖನ ಸ್ಪಷ್ಟವಾಗಿ ಹೇಳುತ್ತದೆ. ಯಾವುದೇ ಪಕ್ಷದಲ್ಲೂ ‘ಹೈಕಮಾಂಡ್’ ಡೊಡ್ಡಪ್ಪನಾಗೇ ಮೆರೆಯುತ್ತದೆ ಎಂಬುದಕ್ಕೆ ಈ ಬರಹದಲ್ಲೂ ಪುರಾವೆಗಳಿವೆ. ಮಂತ್ರಿಮಂಡಲವೇ ಇಲ್ಲದೆ, ಕ್ಯಾಬಿನೆಟ್ ತೀರ್ಮಾನವೂ ಆಗದೆ, ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಾವುದಾದರೂ ಆಶ್ವಾಸನೆ ನೀಡಬಹುದೇ ಎಂಬ ಪ್ರಶ್ನೆಯೂ ಇಲ್ಲಿ
ಚರ್ಚೆಗೊಳಗಾಗಿದೆ. ಇಂಥ ಅರಿವು ಮೂಡಿಸುವ ವಿಚಾರಗಳನ್ನು ಬಂಡಾಯದ ಮುಂಚೂಣಿಯ ಹಿರಿಯ ಲೇಖಕರೊಬ್ಬರು ಮಾಡಬೇಕಾದ ಅನಿವಾರ್ಯ ಬಂದದ್ದು ವಿಪರ್ಯಾಸ.

-ಆರ್.ಜಿ.ಹಳ್ಳಿ ನಾಗರಾಜ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.