ಕಠ್ಮಂಡು: ಭಾರತ ತಂಡ, ಗುರುವಾರ ನಡೆದ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ (ಸ್ಯಾಫ್) 19 ವರ್ಷದೊಳಗಿನವರ ಚಾಂಪಿಯನ್ಷಿಪ್ನಲ್ಲಿ ಬಾಂಗ್ಲಾದೇಶ ತಂಡವನ್ನು 3–0 ಗೋಲುಗಳಿಂದ ಸೋಲಿಸಿತು.
ದಶರಥ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡದ ಪರ ಜಿ.ಗೊಯರಿ, ನವೋಬಾ ಮೀಥಿ ಪಾಂಗಮ್ಬಮ್ ಮತ್ತು ಅರ್ಜುನ್ ಸಿಂಗ್ ಒಯಿನಮ್ ಅವರು ಗೋಲುಗಳನ್ನು ಗಳಿಸಿದರು. ‘ಬಿ’ ಗುಂಪಿನಲ್ಲಿರುವ ಭಾರತ ತನ್ನ ಮುಂದಿನ ಪಂದ್ಯವನ್ನು ಸೆ. 25ರಂದು ಭೂತಾನ್ ವಿರುದ್ಧ ಆಡಲಿದ್ದು, ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ಗುರಿಯನ್ನು ಹೊಂದಿದೆ.
‘ಎ’ ಗುಂಪಿನಲ್ಲಿ ಆತಿಥೇಯ ನೇಪಾಳದ ಜೊತೆ ಮಾಲ್ಡೀವ್ಸ್, ಪಾಕಿಸ್ತಾನ ತಂಡಗಳಿವೆ. ಎರಡು ಗುಂಪುಗಳಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಹಂತಕ್ಕೆ ಮುನ್ನಡೆಯುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.