ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ಜಾರಿ: ಜನಹಿತ ಇರಲಿ

Last Updated 4 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಕೊರೊನಾ ಹಾವಳಿ ತಗ್ಗಿಸಲು ರಾಜ್ಯದ 8 ಜಿಲ್ಲೆಗಳಲ್ಲಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಸೀಟುಗಳು ಮಾತ್ರ ಭರ್ತಿ ಎಂಬ ನಿಯಮವನ್ನು ಕೇವಲ 24 ಗಂಟೆಗಳಲ್ಲಿ ‘ಯುವರತ್ನ’ ಚಿತ್ರತಂಡದ ಕಡು ಒತ್ತಾಯದ ಮೇರೆಗೆ ಏಪ್ರಿಲ್ 7ರವರೆಗೆ ಮುಂದೂಡಿ ನಗೆಪಾಟಲಿಗೀಡಾಗಿದೆ. ಜನಸಾಮಾನ್ಯರ ಕಷ್ಟ ಕೋಟಲೆಗಳನ್ನರಿಯದೆ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕಂಪ್ಯೂಟರ್ ಲೆಕ್ಕಾಚಾರದ ಮೂಲಕ ನಿಯಮಗಳನ್ನು ನಿರ್ಧರಿಸುವ ಅಧಿಕಾರಿಗಳ ಸಲಹೆಗಳನ್ನು ಸರ್ಕಾರ ವಿವೇಚನಾರಹಿತವಾಗಿ ಜಾರಿಗೆ ತರುತ್ತಿದೆ.

ಈಜುಕೊಳ ಬಂದ್ ಒಂದರ್ಥದಲ್ಲಿ ಸರಿ. ಆದರೆ ಸಾಮಾಜಿಕ ಅಂತರವಿದ್ದು ವಿರಳವಾಗಿ ಜನ ಸೇರುವ ಜಿಮ್‍ಗಳಿಗೇಕೆ ನಿಷೇಧ? ಮನೆಯಲ್ಲಿ ಒಂದೆಡೆ ವಾಸಿಸುವ ಪತಿ, ಪತ್ನಿ, ಮಕ್ಕಳು ಚಿತ್ರಮಂದಿರಗಳಲ್ಲಿ ದೂರ ದೂರ ಕೂರಬೇಕೇ? ಕೊರೊನಾ ಹರಡುವುದು ಉಸಿರು, ಬಾಯಿ ಹಾಗೂ ಕೈನಿಂದ ತಾನೇ? ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಕೈಗವಸು ಕೊಟ್ಟು ‘ಹೌಸ್‍ಫುಲ್’ ಪ್ರದರ್ಶನ ಮಾಡಬಹುದಲ್ಲವೇ? ಸಾರಿಗೆ ಬಸ್‍ಗಳಲ್ಲಿ ನಿಂತು ಪ್ರಯಾಣ ಮಾಡುವವರನ್ನು ಮಾತ್ರ ಕೊರೊನಾ ಬಾಧಿಸುವುದೇ? ಈ ಕಠಿಣ ನಿಯಮಗಳಿಗೆ ಸಂಬಂಧಿಸಿದ ಆದೇಶ ಹೊರಡಿಸಿದ ಮಾರನೇ ದಿನವೇ ಜನನಾಯಕರು ಹಾಗೂ ಆರೋಗ್ಯ ಸಚಿವರು ನಡೆಸಿದ ಸಮಾರಂಭಗಳಲ್ಲಿ ಸಾವಿರಾರು ಜನ ಎಗ್ಗಿಲ್ಲದೇ ತುಂಬಿ ತುಳುಕುತ್ತಿದ್ದರು. ಚುನಾವಣಾ ರ‍್ಯಾಲಿಗಳೂ ಆರಂಭವಾಗಿವೆ. ಇದೆಂಥ ನ್ಯಾಯ? ಜನರಿಗೊಂದು, ರಾಜಕಾರಣಿಗಳಿಗೆ ಮತ್ತೊಂದೇ? ಸರ್ಕಾರ ಜನಹಿತ ಯೋಚಿಸಿ ನಿರ್ಬಂಧಗಳನ್ನು ಜಾರಿಗೆ ತರಲಿ.

-ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT