ಮಂಗಳವಾರ, ಮೇ 17, 2022
26 °C

ವಾಚಕರ ವಾಣಿ | ಷೇರುಪೇಟೆ: ಸಣ್ಣ ಹೂಡಿಕೆದಾರರ ಹಿತ ಕಾಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಗಳ ಮೇಲಿನ ಹೂಡಿಕೆಯು ಕಂಪನಿಗಳ, ಹೂಡಿಕೆದಾರರ ಹಾಗೂ ರಾಷ್ಟ್ರದ ಆರ್ಥಿಕತೆಯ ದೃಷ್ಟಿಯಿಂದ ಸದಾ ಉತ್ತಮ ಹೂಡಿಕೆಯೇ. ಮಾರುಕಟ್ಟೆಯು ಊರ್ಧ್ವಮುಖದಲ್ಲಿರುವಾಗ ಮಾರುಕಟ್ಟೆ ಪ್ರವೇಶಿಸುವ ಕಂಪನಿಗಳೂ ಅಧಿಕ. ಆದರೆ ಪ್ರತೀ ಬಾರಿ ಹೀಗೆ ಮಾರುಕಟ್ಟೆಯು ಏರುಗತಿಯಲ್ಲಿರುವ ಸಮಯಾವಕಾಶವನ್ನು ನೋಡಿಕೊಂಡೇ ಕಂಪನಿಗಳು ತಮ್ಮ ಐಪಿಒಗಳಿಗೆ ವಿಪರೀತ ಬೆಲೆ ನಿಗದಿಪಡಿಸುವುದು ಮಾಮೂಲಿ ಆಗಿಬಿಟ್ಟಿದೆ. ಹೂಡಿಕೆದಾರರೂ ಅಂತಹ ಸಂದರ್ಭಗಳಲ್ಲಿ ಹಿಂದೆ ಮುಂದೆ ನೋಡದೆ, ಲಾಭ ಗಳಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸುತ್ತಿರುತ್ತಾರೆ. ಲಾಭ ಬಾಚುವುದು ಮಾತ್ರ ದೊಡ್ಡ ದೊಡ್ಡ ಹೂಡಿಕೆದಾರರು ಹಾಗೂ ವಿದೇಶಿ ಸಂಸ್ಥೆಗಳು.

ಕೆಲವು ತಿಂಗಳುಗಳ ಬಳಿಕ ಹಲವಾರು ಸಂದರ್ಭಗಳಲ್ಲಿ ಐಪಿಒ ಬೆಲೆಗಿಂತಲೂ ಈ ಷೇರುಗಳು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಾ ಸಣ್ಣ ಹೂಡಿಕೆದಾರರು ಕೈ ಸುಟ್ಟುಕೊಳ್ಳುವಂತೆ ಆಗುತ್ತದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಸಣ್ಣ ಹೂಡಿಕೆದಾರರ ಹಿತವನ್ನು ರಕ್ಷಿಸಲು ಇನ್ನಷ್ಟು ಚುರುಕಾಗಬೇಕು. ಆಗಷ್ಟೇ ಆರೋಗ್ಯಕರ ಹೂಡಿಕೆಯ ವಾತಾವರಣ ನಿರ್ಮಾಣವಾದೀತು.
-ಭರತ್ ಬಿ.ಎನ್., ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು