ಚಲನಚಿತ್ರ ಸಾಹಿತಿ ಕೆ.ಕಲ್ಯಾಣ್ ಅವರ ಸಂಸಾರದಲ್ಲಿ ಬಿರುಕು ಮೂಡಿ, ಪೊಲೀಸ್ ಠಾಣೆಯ ಮೆಟ್ಟಿಲು ಏರಿರುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಕುರಿತ ಆರೋಪ, ಪ್ರತ್ಯಾರೋಪಗಳನ್ನು ಸಂಬಂಧಿಸಿದವರು ಪರಿಶೀಲಿಸಲಿ. ಆದರೆ ಮಾಟ ಮಂತ್ರ, ವಶೀಕರಣದಿಂದ ಸಂಸಾರದಲ್ಲಿ ಬಿರುಕು ಮೂಡಿತು ಎಂಬಂತಹ ಪರಸ್ಪರರ ಆರೋಪಗಳೇ ಹೆಚ್ಚಾಗಿ ಪ್ರಚಾರ ಪಡೆಯುತ್ತಿರುವುದನ್ನು ನೋಡಿದರೆ, ಮೂಢನಂಬಿಕೆಯ ವಿರುದ್ಧ ಕಾನೂನು ಮಾಡಿರುವುದು ಸುಳ್ಳೇ ಎಂಬ ಅನುಮಾನ ಮೂಡುತ್ತದೆ. ಮಾಟ, ಮಂತ್ರದಿಂದ ಬೇಕಾದವರನ್ನು ನಿಯಂತ್ರಿಸಬಹುದು ಎನ್ನುವಂತೆ ಬಿಂಬಿತವಾಗುತ್ತಿದೆ. ಮೂಢನಂಬಿಕೆಗಳಿಗೆ ಕುಮ್ಮಕ್ಕು ಕೊಡುವ ಇಂತಹ ಪ್ರಚಾರಗಳಿಗೆ ಮಹತ್ವ ಸಿಗುವುದು ಕೂಡಲೇ ನಿಲ್ಲಲಿ.

- ಮಂಜುನಾಥ್ ಜಿ.,ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.