ಗುರುವಾರ , ಅಕ್ಟೋಬರ್ 22, 2020
22 °C

ಮೂಢನಂಬಿಕೆಗೆ ಮಹತ್ವ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಲನಚಿತ್ರ ಸಾಹಿತಿ ಕೆ.ಕಲ್ಯಾಣ್‌ ಅವರ ಸಂಸಾರದಲ್ಲಿ ಬಿರುಕು ಮೂಡಿ, ಪೊಲೀಸ್ ಠಾಣೆಯ ಮೆಟ್ಟಿಲು ಏರಿರುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಕುರಿತ ಆರೋಪ, ಪ್ರತ್ಯಾರೋಪಗಳನ್ನು ಸಂಬಂಧಿಸಿದವರು ಪರಿಶೀಲಿಸಲಿ. ಆದರೆ ಮಾಟ ಮಂತ್ರ, ವಶೀಕರಣದಿಂದ ಸಂಸಾರದಲ್ಲಿ ಬಿರುಕು ಮೂಡಿತು ಎಂಬಂತಹ ಪರಸ್ಪರರ ಆರೋಪಗಳೇ ಹೆಚ್ಚಾಗಿ ಪ್ರಚಾರ ಪಡೆಯುತ್ತಿರುವುದನ್ನು ನೋಡಿದರೆ, ಮೂಢನಂಬಿಕೆಯ ವಿರುದ್ಧ ಕಾನೂನು ಮಾಡಿರುವುದು ಸುಳ್ಳೇ ಎಂಬ ಅನುಮಾನ ಮೂಡುತ್ತದೆ. ಮಾಟ, ಮಂತ್ರದಿಂದ ಬೇಕಾದವರನ್ನು ನಿಯಂತ್ರಿಸಬಹುದು ಎನ್ನುವಂತೆ ಬಿಂಬಿತವಾಗುತ್ತಿದೆ. ಮೂಢನಂಬಿಕೆಗಳಿಗೆ ಕುಮ್ಮಕ್ಕು ಕೊಡುವ ಇಂತಹ ಪ್ರಚಾರಗಳಿಗೆ ಮಹತ್ವ ಸಿಗುವುದು ಕೂಡಲೇ ನಿಲ್ಲಲಿ.

- ಮಂಜುನಾಥ್ ಜಿ., ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು