‘ಪುಳಿಯೋಗರೆ’ ಎಂಬ ಪದವನ್ನು ಸರಿಯಾಗಿ ಉಚ್ಚರಿಸದ ವಿದ್ಯಾರ್ಥಿನಿಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಸಕಲೇಶಪುರ ತಾಲ್ಲೂಕಿನ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಸುದ್ದಿ ಓದಿ (ಪ್ರ.ವಾ., ಜ. 18) ಬೇಸರವಾಯಿತು.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯು ‘ಪಕ್ಕೆಲುಬು’ ಪದವನ್ನು ಉಚ್ಚರಿಸಲು ತಡವರಿಸುವುದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹೂವಿನಹಡಗಲಿ ತಾಲ್ಲೂಕಿನ ಶಿಕ್ಷಕರೊಬ್ಬರು ಅಮಾನತಾಗಿರುವುದು ಗೊತ್ತಿದ್ದೂ ‘ಪುಳಿಯೋಗರೆ’ ವಿದ್ಯಮಾನ ನಡೆದಿದೆ!

ಹಾಗಾದರೆ, ಕನ್ನಡ ಪದಗಳ ಉಚ್ಚಾರಣೆ ಅಷ್ಟೊಂದು ಕಷ್ಟವೇ? ಹಿಂದೆ ನಾವೆಲ್ಲ ಕಲಿಯುವಾಗ ಕಾಗುಣಿತವನ್ನು ತಲೆಕಟ್ಟು, ಕೊಂಬು ಎಂದೆಲ್ಲ ವಿವರಿಸಿ ಕಲಿಸಲಾಗುತ್ತಿತ್ತು. ಈಗ ಬಹುತೇಕರು ಕ ಕಾ ಕಿ ಕೀ... ಎಂದಷ್ಟೇ ಹೇಳಿಕೊಡುತ್ತಿರುವುದರಿಂದ ಕೈ ಮೈ ಪರಚಿಕೊಂಡರೂ ಮಕ್ಕಳಿಗೆ ಪದಗಳ ಉಚ್ಚಾರಣೆ ಸ್ಪಷ್ಟವಾಗಿ ಬರುತ್ತಿಲ್ಲ. ಹೀಗಾಗಿ ಶಿಕ್ಷಕರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ.

–ಅ.ಮೃತ್ಯುಂಜಯ,ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.