ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಯ ಮೌಲ್ಯ ಹೆಚ್ಚಿಸಿ, ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಲಿ

ಉತ್ತಮ ಶಿಕ್ಷಕ ಪ್ರಶಸ್ತಿ
Last Updated 6 ಸೆಪ್ಟೆಂಬರ್ 2019, 4:23 IST
ಅಕ್ಷರ ಗಾತ್ರ

ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರತಿವರ್ಷ ಜಿಲ್ಲಾ ಮಟ್ಟದ ಶಿಕ್ಷಕರನ್ನು ಆಯ್ಕೆ ಮಾಡುತ್ತದೆ. ಈ ಆಯ್ಕೆ ಪ್ರಕ್ರಿಯೆಗೆ ಇರುವ ಮಾನದಂಡಗಳನ್ನು ಇನ್ನಷ್ಟು ಪಾರದರ್ಶಕ ಮಾಡಬೇಕಾದ ಅಗತ್ಯ ಇದೆ. ಪ್ರಶಸ್ತಿಗಳಿಗೆ ಭಾಜನರಾಗುವ ಕೆಲವು ಶಿಕ್ಷಕರು ಪ್ರಭಾವಿಗಳು, ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು, ಸ್ಥಳೀಯ ಜಿಲ್ಲೆಯವರು, ಶಿಕ್ಷಣ ಇಲಾಖೆ ಜೊತೆ ಸದಾ ಸಂಪರ್ಕದಲ್ಲಿ ಇರುವವರೇ ಆಗಿರುತ್ತಾರೆ.

ಸ್ಥಳೀಯರು ಹತ್ತಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುವುದರಿಂದ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿರುತ್ತಾರೆ. ಅದರಿಂದಾಗಿ ಸುಲಭವಾಗಿ ಪ್ರಶಸ್ತಿ ಪಡೆಯಲು ಇವರಿಗೆ ಸಾಧ್ಯವಾಗುತ್ತದೆ. ಅಂತಹವುಗಳಿಗೆ ಅವಕಾಶ ತುಂಡರಿಸುವ ರೀತಿ ಮಾನದಂಡಗಳನ್ನು ಬಿಗಿಗೊಳಿಸಬೇಕು. ಅರ್ಹ ಶಿಕ್ಷಕರು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಎಲೆ ಮರೆ ಕಾಯಿಯಂತೆ ಎಲ್ಲೋ ಒಂದು ಕಡೆ ತನ್ನ ಕರ್ತವ್ಯ ಮಾಡುತ್ತಾ ಮಕ್ಕಳ ಏಳಿಗೆಗಾಗಿ ಹಂಬಲಿಸುವ ಹೃದಯವಂತ ಶಿಕ್ಷಕರು ಪ್ರಶಸ್ತಿಗಾಗಿ ಹಂಬಲಿಸುವುದಿಲ್ಲ. ಅರ್ಜಿ ಹಾಕಿ ಪ್ರಶಸ್ತಿ ಪಡೆಯಲು ಮುಂದಾಗುವುದಿಲ್ಲ. ಅಂತಹವರನ್ನು ಗುರುತಿಸುವ ಕೆಲಸ ಆಗಬೇಕು. ಇಲಾಖೆ ನೀಡುವ ಪ್ರಶಸ್ತಿಯ ಮೌಲ್ಯ ಹೆಚ್ಚಾಗಬೇಕು ಎಂದರೆ, ಆಯ್ಕೆ ಪ್ರಕ್ರಿಯೆ ಬದಲಾಗಬೇಕು, ಸಂಪೂರ್ಣ ಪಾರದರ್ಶಕವಾಗಿ ಇರಬೇಕು. ಆಯ್ಕೆ ವಿಧಾನ ಡಿಜಿಟಲೀಕರಣಗೊಳ್ಳಬೇಕು.
–ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT