ಪರಿಚಿತರೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಈಚೆಗೆ ಹಂಚಿಕೊಂಡ ಒಂದು ಕಾರ್ಟೂನ್ ಗಮನಸೆಳೆಯಿತು. ಅದರಲ್ಲಿ ಗಿಡಮರಗಳಿಲ್ಲದ ಬೀಳುಭೂಮಿಯೊಂದರಲ್ಲಿ ಆಕ್ಸಿಜನ್ ಸಿಲಿಂಡರನ್ನು ಬೆನ್ನಿಗೇರಿಸಿಕೊಂಡು ಉಸಿರಾಡುತ್ತಿರುವ ಚಿಕ್ಕ ಬಾಲಕನ ಚಿತ್ರವಿದೆ. ಅದರ ಪಕ್ಕದಲ್ಲಿ ಆ ಬಾಲಕನ ತಂದೆ ಹಣದ ಚೀಲವೊಂದನ್ನು ಮಗುವಿನ ಕೈಗಿರಿಸುತ್ತಾ, ‘ಮಗುವೆ, ನಿನ್ನ ಉಜ್ವಲ ಬದುಕಿಗಾಗಿ ನಾನು ಸಂಪಾದಿಸಿದ ಪೂರ್ತಿ ಹಣ ಇಲ್ಲಿದೆ, ತೆಗೆದುಕೋ’ ಎಂದು ಹೇಳುತ್ತಿರುವ ಚಿತ್ರವಿದೆ!

ಪ್ರಸ್ತುತ ಪರಿಸರದ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯದ ಫಲವಾಗಿ ಭವಿಷ್ಯದಲ್ಲಿ ಮನುಕುಲಕ್ಕೆ ಉಂಟಾಗುವ ಪರಿಣಾಮವನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಿಲ್ಲ ಎನ್ನುವಂತಿತ್ತು ಆ ಚಿತ್ರ.

ಇಂದು ನಾವು ಉಸಿರು ನೀಡುವ ಹಸಿರನ್ನು ಹರಣ ಮಾಡಿ, ವಾಯು-ಜಲ-ಮಣ್ಣುಗಳ ಗುಣಮಟ್ಟವನ್ನು ನಾಶ ಮಾಡಿ ಕೇವಲ ಹಣದ ಹಿಂದೆ ಹೋಗುತ್ತಿದ್ದೇವೆ. ನಮ್ಮ ಎಲ್ಲ ಯೋಜನೆಗಳೂ ಪರಿಸರ ವ್ಯವಸ್ಥೆಗೆ ಕೊಡಲಿಪೆಟ್ಟು ಕೊಡುತ್ತಿವೆ. ಆದರೂ ಅದನ್ನು ಗಮನಿಸದೆ ಕೇವಲ ಅದರಿಂದ ಬರುವ ಆದಾಯದ ಮೇಲೆ ಕಣ್ಣು ನೆಟ್ಟಿದ್ದೇವೆ. ಈಗಾಗಲೇ ಪ್ರಕೃತಿ ಪ್ರತಿಕ್ರಿಯೆ ಕೊಡಲು ಆರಂಭಿಸಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಕಾರ್ಟೂನ್‌ನಲ್ಲಿರುವ ಬಾಲಕನ ಸ್ಥಿತಿ ನಿಜವಾಗುತ್ತಾ ಸಾಗುವುದರಲ್ಲಿ ಅನುಮಾನವಿಲ್ಲ.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.