ಭಾನುವಾರ, ಆಗಸ್ಟ್ 14, 2022
20 °C

ಬದುಕಲು ಇವೆ ನೂರಾರು ದಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

'ಏಡ್ಸ್ ಅಂದ್ರೆ ಭಯವಿಲ್ಲ ಕೊರೊನಾದಿಂದ ಬದುಕಿಲ್ಲ' (ಪ್ರ.ವಾ.ಸೆ.11) ಕೊರೊನದಿಂದಾಗಿ ಲೈಂಗಿಕ ಕಾರ್ಯಕರ್ತೆಯರ ಕರಾಳ ಬದುಕಿನ ಹಿನ್ನೋಟ ಈ ವರದಿಯಿಂದ ಗೋಚರವಾಗುತ್ತದೆ.

ಬಹುತೇಕರು ಅನಿವಾರ್ಯ ಬದುಕಿನ ಬವಣೆ ನೀಗಿಸಲು ಈ ಕಾರ್ಯಕ್ಕೆ ತಮ್ಮನ್ನು ತಾವು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಂತೆ ಕಾಣುತ್ತಿದೆ. ರಾಜ್ಯದಲ್ಲಿ ಲೈಂಗಿಕ ಕಾರ್ಯಕರ್ತೆಯರ ಅಂಕಿ-ಅಂಶ ನೋಡಿದಾಗ ಹೆಚ್ಐವಿ ಪೀಡಿತರು, ಅಂಗವಿಕಲರು, ಬಾಲಕಿಯರು ಇದರಲ್ಲಿ ತೊಡಗಿರುವುದು ದಿಗ್ಬ್ರಾಂತಿಗೆ ಕಾರಣವಾಗುತ್ತದೆ. ಸರ್ಕಾರ ಕೋಟಿ ಕೋಟಿ ಹಣವನ್ನು ಎಚ್ಐವಿ ನಿರ್ಮೂಲನೆಗಾಗಿನೆ ಖರ್ಚು ಮಾಡುತ್ತಿದೆ ಇದೆಲ್ಲಾ ಸೊಂಕಿತರಿಗೆ ತಲುಪುತ್ತಿದೆಯೊ ಇಲ್ಲವೊ ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ಕೆಲವರು ಐಷಾರಾಮಿ ಬದುಕಿಗಾಗಿ ಈ ಕೃತ್ಯದಲ್ಲಿ ತೊಡಗಿದರೆ.ಒಂದಷ್ಟು ಜನ ಬಡತನದ ಬದುಕನ್ನು ನೀಗಿಸಲು ಅನಿವಾರ್ಯವಾಗಿ ಈ ದಂದೆಗೆ ಇಳಿಯುತ್ತಿದ್ದಾರೆ ಇವರಿಗೆ ಅಪರಾಧಿ ಪ್ರಜ್ಞೆ ಕಾಡಿದರೂ ಜೀವನ ನಿರ್ವಹಣೆಗೆ ಇದೆಲ್ಲ ಅನಿವಾರ್ಯ ಎಂಬ ಗಟ್ಟಿ ಮನಸ್ಸು ಮಾಡಿರಬಹುದು. ಕೊರೊನ ಇಂತವರ ಬದುಕನ್ನ ಕಿತ್ತುಕೊಂಡಿದೆ ಎನ್ನುವುದಕ್ಕಿಂತ ಇದರಾಚೆಗು ಸಮಾಜದಲ್ಲಿ ಮೈಮುರಿದು ದುಡಿದು ಬದುಕಬಹುದು ಎಂಬುದಕ್ಕೆ ಸಾವಿರಾರು ಜನರ ಜೀವಂತ ಉದಾಹರಣೆಗಳಿವೆ.ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಇಂತವರನ್ನು ಗುರುತಿಸಿ ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ.ಇಲ್ಲವಾದರೆ ಇದೊಂದು ಹೆಮ್ಮರವಾಗಿ ಬೆಳೆದು ಮುಂದೊಂದು ದಿನ ಕಂಟಕವಾಗುವುದರಲ್ಲಿ ಅನುಮಾನವಿಲ್ಲ.

ಶಿವಕುಮಾರ್ ಯರಗಟ್ಟಿಹಳ್ಳಿ, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.