ಬುಧವಾರ, ಸೆಪ್ಟೆಂಬರ್ 29, 2021
19 °C

ಇದು ಪ್ರಜಾಪ್ರಭುತ್ವದ ಸೌಂದರ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರದಲ್ಲಿ ಇತ್ತೀಚೆಗೆ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಸನ್ಮಾನಿತರಾಗಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಪೊಲೀಸರಿಂದ ಬೆನ್ನುಮೂಳೆ ಮುರಿಯುವ ರೀತಿಯಲ್ಲಿ ಹೊಡೆತ ತಿಂದಿದ್ದೆ. ಈಗ ಪೊಲೀಸರ ಕೈನಿಂದ ಸೆಲ್ಯೂಟ್ ಸ್ವೀಕರಿಸುತ್ತಿದ್ದೇನೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ’ ಎಂದು ಮಾರ್ಮಿಕವಾಗಿ ಹೇಳಿದರು.

ನಿಜ, ಪ್ರಜಾಪ್ರಭುತ್ವದಲ್ಲಿ ಎಂತೆಂಥ ಅವಕಾಶಗಳು ನಾಗರಿಕರಿಗೆ ದೊರೆಯುತ್ತವೆ. ಅದರಲ್ಲೂ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾದರೆ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿ ಸ್ಥಾನದವರೆಗೆ ಏರಲು ಸಾಧ್ಯವಿದೆ. ಅಡ್ಡದಾರಿ ಹಿಡಿಯದೆ ಸಂಯಮದಿಂದ ಸೇವೆ ಮಾಡಿದರೆ ಉನ್ನತ ಸ್ಥಾನ ಒಲಿಯುವ ಸಾಧ್ಯತೆ ಇದೆ. ಹಾದಿ ತಪ್ಪಿದರೆ ಜೈಲು ಪಾಲಾಗುವ ಸಂದರ್ಭವೂ ಎದುರಾಗಬಹುದು. ಪ್ರಜೆಗಳೇ ಪ್ರಭುಗಳಾಗುವ ಆಶಯದ ಪ್ರಜಾಪ್ರಭುತ್ವದ ಅಂತರಂಗ ನಿಜಕ್ಕೂ ಸೌಂದರ್ಯವರ್ಧಿನಿಯಾಗಿದೆ.

ಗಣಪತಿ ಶಿರಳಗಿ, ಸಾಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.