ಟಿಕ್ ಟಾಕ್ ಆ್ಯಪ್ ಸಾಧಕಬಾಧಕ ಪರಿಶೀಲಿಸಬೇಕಿದೆ

ಶನಿವಾರ, ಏಪ್ರಿಲ್ 20, 2019
29 °C

ಟಿಕ್ ಟಾಕ್ ಆ್ಯಪ್ ಸಾಧಕಬಾಧಕ ಪರಿಶೀಲಿಸಬೇಕಿದೆ

Published:
Updated:

‘ಟಿಕ್ ಟಾಕ್’ ಎಂದರೆ ಸಾಕು ಎಳೆ ವಯಸ್ಸಿನವರಿಂದ ಇಳಿ ವಯಸ್ಸಿನವರೂ, ಇರುವ ಕೆಲಸವನ್ನು ಬದಿಗಿಟ್ಟು ಕ್ಯಾಮೆರಾ ಮುಂದೆ ಅಭಿನಯಿಸಲು ಆರಂಭಿಸುತ್ತಾರೆ. ಆ ಮಟ್ಟಿಗೆ ಅದು ಗೀಳು ಅಂಟಿಸಿದೆ. ಇದು, ಮಿತಿಯಲ್ಲಿದ್ದರೆ ಪರವಾಗಿಲ್ಲ. ಈಗೀಗ ವಿಪರೀತಕ್ಕೆ ಹೋಗಿದೆ.

ಓದು–ಬರಹ ಬಿಟ್ಟು ಮಕ್ಕಳು ಇದರಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವೊಮ್ಮೆ ಅಪಾಯಕಾರಿ ಸಾಹಸಗಳಿಗೂ ಪ್ರೇರೇಪಿಸುತ್ತಿರುವುದು ಆತಂಕಕಾರಿ.

ಇದರ ಕೆಟ್ಟ ಪರಿಣಾಮಗಳನ್ನು ಅರಿತು ತಮಿಳುನಾಡು ಸರ್ಕಾರ ಈ ‘ಟಿಕ್ ಟಾಕ್’ ಆ್ಯಪ್ ನಿಷೇಧಿಸಿದೆ. ನಮ್ಮ ರಾಜ್ಯದಲ್ಲೂ ನಿಷೇಧಿಸಬೇಕು ಎಂದು ಆಗ್ರಹಿಸಿ ರಾಜ್ಯ ಮಹಿಳಾ ಆಯೋಗವು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರ ಸಾಧಕ–ಬಾಧಕ ಅವಲೋಕಿಸುವುದು ಅಗತ್ಯ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !