ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಕಲಾಪ: ತರಬೇತಿ ಅಗತ್ಯ

Last Updated 5 ಜುಲೈ 2020, 19:30 IST
ಅಕ್ಷರ ಗಾತ್ರ

ನ್ಯಾಯಾಲಯದ ಕಲಾಪಗಳನ್ನು ಇತ್ತೀಚೆಗೆ ಆನ್‌ಲೈನ್‌ ಮೂಲಕ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವೃತ್ತಿನಿರತರಾಗಿರುವ ವಕೀಲರಿಗೆ ಅಂತರ್ಜಾಲದ ಮೂಲಕ ಕಲಾಪಗಳನ್ನು ನಡೆಸುವ ಬಗೆ ಸರಿಯಾಗಿ ತಿಳಿಯದೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದನ್ಯಾಯಾಲಯಗಳಿಗೆ ಸುಮಾರು ದಿನಗಳ ಕಾಲ ರಜೆ ಇದ್ದುದರಿಂದ ಹಾಗೂ ಭೌತಿಕವಾಗಿ ವಾದ ಮಾಡಲು ಅವಕಾಶವಿಲ್ಲದೆ ಅವರ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ವಕೀಲರು ಆನ್‌ಲೈನ್‌ನಲ್ಲಿ ಹೇಗೆ ಪ್ರಕರಣಗಳನ್ನು ತೆಗೆದುಕೊಂಡು ವಾದ ಮಾಡಬೇಕು ಎಂಬ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ವಕೀಲರ ಸಂಘಗಳಲ್ಲಿ ರಾಜ್ಯ ವಕೀಲರ ಪರಿಷತ್ ನೆರವಿನೊಂದಿಗೆ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಿದ್ದೇ ಆದರೆ ಎಷ್ಟೋ ವಕೀಲರು ಬಹಳ ಸುಲಭವಾಗಿ ತಮ್ಮ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಲು ಅನುಕೂಲ ವಾಗುತ್ತದೆ. ಇದರಿಂದ ಅವರ ಆರ್ಥಿಕ ಸ್ಥಿತಿ ಸಹ ಸುಧಾರಿಸುತ್ತದೆ.

- ಡಾ. ಸತೀಶ್ ಗೌಡ ಎನ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT