ಭಾನುವಾರ, ಜುಲೈ 3, 2022
26 °C

ಹೊಣೆಯರಿಯದ ನೌಕರರು, ಅರೆಬೆಂದ ನಾಯಕತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರನೆ ನಡೆದ ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ಆದ ತೊಂದರೆ ಅಷ್ಟಿಷ್ಟಲ್ಲ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು, ಜನರಿಂದಲೇ ನಮ್ಮ ಸಂಸ್ಥೆ ನಡೆಯುತ್ತಿರುವುದು ಎಂಬುದನ್ನು ಮನಗಾಣದ ನೌಕರರು ಮತ್ತು ಇನ್ನೊಂದು, ಜನಸಾಮಾನ್ಯರಿಗೆ ಎಷ್ಟು ತೊಂದರೆಯಾದರೂ ಪರವಾಗಿಲ್ಲ ಸ್ವಪ್ರತಿಷ್ಠೆ ಮುಖ್ಯ ಎಂದುಕೊಂಡ ಅರೆಬೆಂದ ನಾಯಕತ್ವ. ನೌಕರರ ಮುಖಂಡರಿಗೆ ಸರ್ಕಾರ ಕೊಟ್ಟಿರುವ ಭರವಸೆಗಳನ್ನು ನೋಡಿದರೆ, ಇವೆಲ್ಲವನ್ನೂ ಕೇವಲ ಮಾತುಕತೆಯ ಮೂಲಕವೇ ಮುಗಿಸಬಹುದಿತ್ತು, ಇಷ್ಟು ದೊಡ್ಡದು ಮಾಡುವ ಅವಶ್ಯಕತೆಯೇ ಇರಲಿಲ್ಲ ಎನಿಸುತ್ತದೆ. ಒಟ್ಟಿನಲ್ಲಿ ಎರಡೂ ಕಡೆಯವರ ಮೂರ್ಖತನಕ್ಕೆ ಬೆಲೆ ತೆತ್ತಿದ್ದು ಮಾತ್ರ ಜನಸಾಮಾನ್ಯರು.

-ನರಸಿಂಹಮೂರ್ತಿ, ಬೆಂಗಳೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು