ಶುಕ್ರವಾರ, ಆಗಸ್ಟ್ 6, 2021
21 °C

ಮತದಾರರ ಮನಗೆದ್ದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೊಳಚೆಗೆ ಹೋಲಿಸಿದ್ದಾರೆ (ಪ್ರ.ವಾ., ಜೂನ್‌ 16). ಇದು ಸಚಿವ ಸ್ಥಾನಕ್ಕೆ ಗೌರವ ತರುವಂತಹ ಮಾತಲ್ಲ. ವೈಯಕ್ತಿಕ ರಾಜಕೀಯ ಏನೇ ಇರಲಿ, ಅದನ್ನು ಕೀಳು ಮಟ್ಟದ ಭಾಷೆಯ ಮೂಲಕ ತೋರ್ಪಡಿಸುವುದು ನಾಯಕತ್ವದ ಲಕ್ಷಣ ಅಲ್ಲ.

ಲಕ್ಷ್ಮಿ ಅವರು ಸಾವಿರಾರು ಮತದಾರರ ಮನಗೆದ್ದು ಶಾಸಕಿಯಾದವರು ಎಂಬುದನ್ನು ಜಾರಕಿಹೊಳಿಯವರು ನೆನಪಿಡಬೇಕು. ಅವರು ಹೀಗೆ ಕೀಳುಮಟ್ಟದ ಭಾಷೆಯ ಮೂಲಕ ಹೆಣ್ಣು ಮಕ್ಕಳನ್ನು ನಿಂದಿಸಿದರೆ, ಅವರ ನಾಯಕ ನರೇಂದ್ರ ಮೋದಿಯವರ ‘ಬೇಟಿ ಬಚಾವೋ ಬೇಟಿ ಪಢಾವೋ’ ಘೋಷಣೆಗೆ ಮಹತ್ವ ಬರುವುದಾದರೂ ಹೇಗೆ?

ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.