ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ವ್ಯಾಕರಣದ ಸೊಬಗಿಲ್ಲದ ಒಣಸಿಪ್ಪೆ!

Last Updated 26 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕನ್ನಡ ಮಾಧ್ಯಮ ಪಠ್ಯಪುಸ್ತಕಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಏಕೆಂದರೆ ಅವುಗಳಲ್ಲಿ ಕನ್ನಡ ಅಕ್ಷರಗಳಿವೆಯೇ ವಿನಾ ಸ್ಥಳೀಯ ಸೊಗಡಿಲ್ಲ! ಕನ್ನಡವು ಮಾಧ್ಯಮವಾಗಬೇಕಾದರೆ ಬರೀ ಅಕ್ಷರಗಳು ಕನ್ನಡದಲ್ಲಿದ್ದರೆ ಸಾಲದು. ಅಲ್ಲಿ ಕನ್ನಡದ ಸೊಬಗು ಹಾಗೂ ಲಾಲಿತ್ಯ ತುಂಬಿ ಬರಬೇಕು. ಮೊದಮೊದಲು ನಮ್ಮ ಕರ್ನಾಟಕ ಸರ್ಕಾರವೇ ರಾಜ್ಯ ಮಟ್ಟದ ಪಠ್ಯಪುಸ್ತಕ ರಚನಾ ಸಮಿತಿ ಮಾಡಿ, ಯೋಗ್ಯ ಪುಸ್ತಕಗಳನ್ನು ನಾಡವರ ಕೈಗೆ ಕೊಡುತ್ತಿತ್ತು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕುಲಗೆಟ್ಟ ಪುಸ್ತಕಗಳನ್ನು ಮಕ್ಕಳ ಕೈಗೆ ಕೊಡುವ ಪರಿಪಾಟ ಶುರುವಾಗಿದೆ.

ಇದಕ್ಕೆ ಉದಾಹರಣೆಯಾಗಿ, ಪ್ರಸ್ತುತ ಎಂಟನೇ ತರಗತಿಯ ಎನ್‌ಸಿಇಆರ್‌ಟಿ ವಿಜ್ಞಾನ ಪಠ್ಯದ ಒಂದು ಸಂಗತಿ ಕಡೆಗೆ ಪ್ರಾಜ್ಞರ ಗಮನ ಸೆಳೆಯಬಯಸುತ್ತೇನೆ. ಅಲ್ಲಿ ಬುಝೋ ಮತ್ತು ಪಹೇಲಿ ಎಂಬ ಎರಡು ಪಾತ್ರಗಳಿವೆ. ಈ ಬಗೆಯ ಹೆಸರುಗಳು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಾಣಸಿಗುತ್ತವೆ? ನಮ್ಮ ಪರಿಸರಕ್ಕೆ ಅಪರಿಚಿತವಾದ ಇಂತಹ ಹೆಸರಿನ ವ್ಯಕ್ತಿಗಳನ್ನು ಮುಂದೆ ಮಾಡಿ ಮಕ್ಕಳಿಗೆ ನಾವು ಏನನ್ನು ಹೇಳಲು ಹೊರಟಿದ್ದೇವೆ?

ಶಾಲಾ ಶಿಕ್ಷಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿರ್ವಹಿಸಬೇಕೆಂದು ನಮ್ಮ ಸಂವಿಧಾನವು ಹೇಳುತ್ತದೆ. ಆದರೆ ನಮ್ಮದು ಭಿನ್ನ ಭಿನ್ನ ಸಂಸ್ಕೃತಿಯ ನೆಲ-ನೆಲೆ ಎಂಬುದನ್ನು ಎನ್‌ಸಿಇಆರ್‌ಟಿಯು ಮರೆತಂತಿದೆ. ಇಡೀ ಭಾರತವನ್ನು ಒಂದೇ ಸಂಸ್ಕೃತಿಯಡಿ ತರಲು ಹೊರಟಿದೆ. ಇಂತಹ ಮನೋಭಾವದ ಪರಿಣಾಮವಾಗಿ, ಒಣಸಿಪ್ಪೆಯಂತಹ ಪಠ್ಯಪುಸ್ತಕಗಳು ರಚನೆಗೊಳ್ಳುತ್ತವೆ. ಇಂತಹ ತಪ್ಪುಗಳನ್ನು ಸರಿಪಡಿಸಲು ಶಿಕ್ಷಣ ಇಲಾಖೆ ಈಗಲೂ ಗಮನಹರಿಸಬಹುದು.

-ಕೆ.ಬಿ.ಹೊನ್ನಾಯ್ಕ,ಸದಲಗಾ, ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT