ಶುಕ್ರವಾರ, ಜನವರಿ 21, 2022
29 °C

ದಿಟ್ಟ ಹೆಜ್ಜೆ ಇಲ್ಲೂ ಇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2014ರಿಂದ ಈಚೆಗೆ ದೇಶದಲ್ಲಿ ನಾಗರಿಕ ಪ್ರಶಸ್ತಿ ನೀಡುವುದರಲ್ಲಿ ಮಹತ್ತರವಾದ ಬದಲಾವಣೆ ಕಂಡುಬರುತ್ತಿದೆ. ಸಮಾಜದ ಅತ್ಯಂತ ಕೆಳಸ್ತರದಲ್ಲಿನ ಸಮಾಜಸೇವಕರು, ಪರಿಸರವಾದಿಗಳು, ದೇಶಸೇವೆಯಲ್ಲಿ ತೊಡಗಿಸಿಕೊಂಡ
ವರು, ಶಿಕ್ಷಣ ಪ್ರೇಮಿಗಳು, ಸೇವೆಯನ್ನೇ ಮುಖ್ಯವಾಗಿರಿಸಿಕೊಂಡು ಎಲೆಮರೆಯ ಕಾಯಿಗಳಂತಿದ್ದ ಅನೇಕರನ್ನು ಹೆಕ್ಕಿ ತೆಗೆದು ಪ್ರತಿಷ್ಠಿತ ‘ಪದ್ಮ’ ಪ್ರಶಸ್ತಿಯಿಂದ ಸನ್ಮಾನಿಸಿರುವುದು ಕೇಂದ್ರ ಸರ್ಕಾರದ ಶ್ಲಾಘನೀಯ ಹೆಜ್ಜೆ.

ಇದೇ ರೀತಿ ವಿಧಾನಪರಿಷತ್ ಚುನಾವಣೆಗೆ ಹಾಗೂ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆರಿಸುವಾಗಲೂ ಹೊಸ ಮಾನದಂಡವನ್ನೇಕೆ ಪ್ರಯೋಗಿಸಬಾರದು? ಏಕೆಂದರೆ ವಿಧಾನಪರಿಷತ್ ಮತ್ತು ರಾಜ್ಯಸಭೆಯು ಕೆಳಮನೆ ಯಲ್ಲಿ ಅಂಗೀಕರಿಸಿದ ಮಸೂದೆಗಳನ್ನು ಪುನರ್‌ವಿಮರ್ಶೆಗೆ ಒಳಪಡಿಸಿ, ಬದಲಾ ವಣೆಯ ಅವಶ್ಯಕತೆ ಇದ್ದಲ್ಲಿ ಮಾರ್ಪಾಡು ಮಾಡಲು ಸಲಹೆ ನೀಡುತ್ತವೆ. ಅದಕ್ಕಾಗಿಯೇ ಇಲ್ಲಿ ಬುದ್ಧಿವಂತರು, ತಜ್ಞರು, ವಿಜ್ಞಾನಿಗಳು, ವಿಮರ್ಶ ಕರು ಒಳಗೊಂಡಿರಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ಇಲ್ಲಿ ನಡೆಯುತ್ತಿರು ವುದೇ ಬೇರೆ. ಇಲ್ಲಿಯ ಆಭ್ಯರ್ಥಿ ಗಳ ಆಯ್ಕೆ ಕೂಡ ಹೀನ ರಾಜಕೀಯದ ಕೂಸಾಗಿದೆ. ಇಂತಹ ಸ್ಥಿತಿ ನಿವಾರಿಸಲು ಸರ್ಕಾರ ಪದ್ಮ ಪ್ರಶಸ್ತಿ ನೀಡುವಲ್ಲಿ ಇಟ್ಟ ದಿಟ್ಟ ಹೆಜ್ಜೆಯನ್ನು ಇಲ್ಲೂ ಇಡಬಹುದಲ್ಲವೇ?

- ಗಂಗಾಧರ ಅಂಕೋಲೆಕರ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.