ಸೋಮವಾರ, ಸೆಪ್ಟೆಂಬರ್ 27, 2021
22 °C

ಗೋಡ್ಸೆ ಆರಾಧಕರ ಬಗ್ಗೆ ಮೌನವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್‌ನಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಹಿಂದೂ ಸೇನಾ ನಿರ್ಧರಿಸಿರುವ ಸುದ್ದಿ (ಪ್ರ.ವಾ.,
ಸೆ. 13 ) ಓದಿ ತುಂಬಾ ಬೇಸರವಾಯಿತು. ಮಹಾತ್ಮ ಗಾಂಧಿಯವರ ಹಂತಕ ಗೋಡ್ಸೆಯ ಆರಾಧನೆಯೆಂದರೆ ಅದು ಪರೋಕ್ಷವಾಗಿ ಗಾಂಧೀಜಿಯನ್ನು ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ವಿರೋಧಿಸುವುದೆಂದೇ ಅರ್ಥ! ಇದು ದೇಶದ್ರೋಹವಾಗುವುದಿಲ್ಲವೇ?

ಅಷ್ಟಕ್ಕೂ ಗಾಂಧೀಜಿ ಈ ದೇಶಕ್ಕೆ ಮಾಡಿದ ದ್ರೋಹವಾದರೂ ಏನು? ತಮ್ಮೆಲ್ಲಾ ವೈಯಕ್ತಿಕ ಜೀವನವನ್ನು ದೇಶಕ್ಕಾಗಿ ಧಾರೆಯೆರೆದು ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಅವರ ತಪ್ಪೇ? ಇಂದಿನ ಯುವಕರಿಗೆ ಗಾಂಧೀಜಿ ಆದರ್ಶವಾಗಬೇಕೇ ವಿನಾ ಗೋಡ್ಸೆಯಲ್ಲ. ಗೋಡ್ಸೆ ಆರಾಧಕರ ಬಗ್ಗೆ ಜಾಣಮೌನ ವಹಿಸುತ್ತಿರುವ ಸರ್ಕಾರಗಳು ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿವೆ ಎಂಬುದು ಬಹಿರಂಗವಾಗಬೇಕಾಗಿದೆ.

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.