ಭಾನುವಾರ, ಆಗಸ್ಟ್ 25, 2019
21 °C

ಯಾಕಣ್ಣಾ ಎನ್ನುವ ಮುನ್ನ...

Published:
Updated:

ಕೆಲ ದಿನಗಳ ಹಿಂದೆ ಸಾರ್ವಜನಿಕ ಶೌಚಾಲಯವೊಂದರಲ್ಲಿ ಸ್ತ್ರೀ– ಪುರುಷ‌‌ ಜೋಡಿ ಆಪ್ತವಾಗಿದ್ದ ಗಳಿಗೆಗಳನ್ನು ಯಾರೋ ಒಬ್ಬರು ಪ್ರಶ್ನಿಸುತ್ತಾ, ಮೊಬೈಲ್‌ನಲ್ಲಿ ಚಿತ್ರೀಕರಿಸಿ‌ ಅದರ ವಿಡಿಯೊ ತುಣುಕನ್ನು ಜಾಲತಾಣಗಳಲ್ಲಿ‌ ಹರಿಯಬಿಟ್ಟಿದ್ದರು. ಅದರಲ್ಲಿ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ‘ಯಾಕಣ್ಣಾ’ ಎಂದು ಕೇಳಿದ ರೀತಿ ತಮಾಷೆಯಾಗಿ ಕಾಣಿಸಿ, ಆ ವಿಡಿಯೊ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದರಿಂದ ವಿಶೇಷವಾಗಿ ಆ ಮಹಿಳೆ ಬಹಳ ನೊಂದು ‘ಆತ್ಮಹತ್ಯೆ ಮಾಡಿಕೊಳ್ತೇನೆ’ ಎಂದಿದ್ದೂ ಸುದ್ದಿಯಾಗಿತ್ತು.

ತಿಂಗಳುಗಳ ಬಳಿಕವೂ ಅವರ ಆ ಮಾತುಗಳನ್ನು ಜನ ಆಡಿಕೊಂಡು ನಗುವುದು, ಯಾಕಣ್ಣಾ ಎಂದು ತಮಾಷೆ ಮಾಡುತ್ತಿರುವುದು ನಿಜಕ್ಕೂ ನಮಲ್ಲಿನ ಮಾನವೀಯತೆ ಮತ್ತು ಸಂವೇದನಾಶೀಲತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಟಿ.ವಿ ವಾಹಿನಿಯೊಂದರ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಕೂಡ ಇತ್ತೀಚೆಗೆ ಸ್ಪರ್ಧಿಗಳು ಪದೇ ಪದೇ ಇದನ್ನು ಬಳಸಿದ್ದು, ತೀರ್ಪುಗಾರರು ತಮ್ಮ ಜವಾಬ್ದಾರಿ ಮರೆತು ನಕ್ಕಿದ್ದು ಮತ್ತಷ್ಟು ಬೇಸರ ತರಿಸಿತು. ಆ ಸ್ತ್ರೀ– ಪುರುಷ ಮಾಡಿದ ತಪ್ಪನ್ನು ಖಂಡಿಸೋಣ. ಆದರೆ ಅದನ್ನು ತಮಾಷೆಯ ವಸ್ತುವಾಗಿ ಸ್ವೀಕರಿಸುವುದು ಖಂಡನೀಯ. ಇದರಿಂದ ಅಶ್ಲೀಲ ವಿಡಿಯೊ ನೋಡಲು ನಾವೇ ಹಲವರಿಗೆ ಪ್ರೇರಣೆ ನೀಡಿದಂತೆ ಆಗುತ್ತದೆ.

-ನರೇಂದ್ರ ಎಸ್. ಗಂಗೊಳ್ಳಿ‌, ಕುಂದಾಪುರ

Post Comments (+)