‘ಈ ಪೂರ್ವಗ್ರಹಗಳೇಕೆ?’ ಸಂಪಾದಕೀಯದಲ್ಲಿ (ಫೆ. 26) ‘ತಂಗಡಿ’ ಎಂದು ಬರೆಯಲಾಗಿದೆ. ಹಿಂದಿನ ದಿನದ ವರದಿಯಲ್ಲೂ ಅದು ‘ತಂಗಡಿ’ ಎಂದಾಗಿತ್ತು. ಆದರೆ ಆ ಊರಿನ ಹೆಸರು ತಂಗಡಗಿ.

ತಂಗಡಗಿ, ಮುದ್ದೇಬಿಹಾಳ ತಾಲ್ಲೂಕಿನ ಬಾಜೂ ತಾಲ್ಲೂಕಾದ ಹುನಗುಂದ ತಾಲ್ಲೂಕಿಗೆ ಸೇರಿದೆ. ಅಲ್ಲಿ ಬಸವಣ್ಣನವರ ಧರ್ಮಪತ್ನಿ ನೀಲಮ್ಮನವರ ಸಮಾಧಿ ಇದೆ. ಅಲ್ಲಿಯೇ ಹಡಪದ ಅಪ್ಪಣ್ಣನ ಸಮಾಧಿಯೂ ಇದೆ. 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ನಾನಾ ಕಷ್ಟ ಅನುಭವಿಸಿ, ಬಸವಣ್ಣನವರ ಅಂಗರಕ್ಷಕನಾಗಿ ಸೇವೆ ಸಲ್ಲಿಸುತ್ತಾ, ನೀಲಮ್ಮನವರನ್ನು ರಕ್ಷಿಸಲು ತಂಗಡಗಿಯಲ್ಲಿ ನೆಲೆನಿಂತವರು ಅಪ್ಪಣ್ಣ.

ನೀಲಮ್ಮನವರು ಸಮಾಧಿಸ್ಥರಾದ ನಂತರ, ಅವರೂ ತಂಗಡಗಿಯಲ್ಲಿ ಸಮಾಧಿಸ್ಥರಾದರು. ಈ ಸಮಾಧಿಗಳನ್ನು ಸಂರಕ್ಷಿಸಿಡ ಲಾಗಿದೆ. ಹಡಪದ, ಸವಿತಾ ಮುಂತಾದ ಹೆಸರಿ ನಿಂದ ಕರೆಯಲಾಗುವ ಈ ಸಮಾಜದವರು ತಮ್ಮದೇ ಜಗದ್ಗುರುವನ್ನು ನಿಯಮಿಸಿ ಕೊಂಡಿದ್ದಾರೆ. ಹಡಪದ ಅಪ್ಪಣ್ಣನವರನ್ನು ತಮ್ಮ ಕುಲಗುರು ಎಂದು ಪರಿಗಣಿಸಿ, ತಂಗಡಗಿಯನ್ನು ಕೇಂದ್ರ ಸ್ಥಾನವಾಗಿಸಿಕೊಂಡಿದ್ದಾರೆ.

ಇಂಥ ಸಮಾಜದವರು ತಂಗಡಗಿಯಲ್ಲಿ ತಮ್ಮ ಕುಲೋದ್ಧಾರಕರಾದ ಅಪ್ಪಣ್ಣನವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು, ಮುದ್ದೇಬಿಹಾಳ ತಹಶೀಲ್ದಾರ್ ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರು ವ್ಯತಿರಿಕ್ತ ರಿಪೋರ್ಟು ಕೊಡುವುದೇಕೆ? ಇಂಥ ವಿಷಯದಲ್ಲಿ ಅಧಿಕಾರಿ ವರ್ಗದವರು ಮೂಗು ತೂರಿಸುವುದು ಸರ್ವಥಾ ಸಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.