ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಸೆಸ್ ದುರ್ಬಳಕೆ

Last Updated 17 ಜುಲೈ 2014, 19:30 IST
ಅಕ್ಷರ ಗಾತ್ರ

ಪುಸ್ತಕ, ಪತ್ರಿಕೆಗಳಿಗೆ ಹಣ ಪೋಲು ಮಾಡ­ಬಾರ­ದೆಂದು ಬಿಬಿಎಂಪಿ ಸುಮಾರು ₨ 200­ ಕೋಟಿ  ಗ್ರಂಥಾ­ಲಯ ಸೆಸ್‌ ಬಾಕಿ ಇಟ್ಟು­ಕೊಂಡು ನಗರ ಕೇಂದ್ರ ಅಧಿಕಾರಿ­ಗಳನ್ನು ದಬಾ­ಯಿ­ಸು­ತ್ತಿದೆ ಎಂಬ ಸುದ್ದಿ (ಪ್ರ. ವಾ. ಜುಲೈ 4) ಓದಿ ಇಲಾಖೆಯ ನಿವೃತ್ತ ಅಧಿ­ಕಾರಿ­ಯಾಗಿ ನಾನು ಕಳವಳ­ಗೊಂಡಿ­ದ್ದೇನೆ. ಸದರಿ ಸುದ್ದಿಗೆ ಅಧಿಕಾರಿ­ಗಳು ಸ್ಪಂದಿಸಿ­ಲ್ಲ­ವೆಂದು ವಿಷಾದ­ವಾಗು­ತ್ತದೆ. ರೋಗಗ್ರಸ್ತ ಬೃಹತ್‌ ನಗರ ಪಾಲಿಕೆ­ಯಿಂದಾಗಿ ಗ್ರಂಥಾ­­ಲ­ಯ­­ಗಳು ಕೋಮಾ ಸ್ಥಿತಿ­ ಯ­­ಲ್ಲಿ­ದ್ದರೆ ಅಲ್ಲಿಯ ಜನ­ಪ್ರತಿನಿಧಿಗಳಿಗೆಎಲ್ಲಿ­ಲ್ಲದ ಖುಷಿ ಆಗಿರಲಿಕ್ಕೆ ಸಾಕು!

ಯಾರಾದರೊಬ್ಬರು ಕೋರ್ಟಿಗೆ ಸಾರ್ವ­­ಜ­ನಿಕ ಹಿತಾಸಕ್ತಿ ಅರ್ಜಿ ಹಾಕಿ­ದರೆ  ಸಮಸ್ಯೆ ನಿವಾರಣೆ ಆಗುತ್ತದೆಂದು ಒಂದೂ­ವರೆ ದಶ­ಕದ ಹಿಂದೆ ಇಲಾ­ಖೆಯ ನಿರ್ದೇಶಕರು ಹೇಳು­ತ್ತಿದ್ದ ಮಾತು ಇಂದಿಗೂ ನೆನಪಿದೆ.

‘ಗ್ರಂಥಾ­ಲಯ ಕಾನೂನು, 1955’ ಜಾರಿಗೆ ಬಂದ ಲಾಗಾಯ್ತು ಇದೇ ಪರಿಸ್ಥಿತಿ ಇದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT