ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದ ಆರೋಪ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಿದೇಶಗಳಿಂದ ದುಡ್ಡು ತರುವ ಉದ್ದೇಶದಿಂದ ಮದರ್‌ ತೆರೆಸಾ ಅವರು ಭಾರತವನ್ನು ‘ಬಡವರ, ದರಿದ್ರರ ರಾಷ್ಟ್ರ’ ಎಂದು ಬಿಂಬಿಸಿ, ವಿದೇಶಗಳಲ್ಲಿ ದೇಶದ ಮಾನ ಹರಾಜು ಹಾಕಿದರು. ಕೊನೆಗೆ ‘ಸೇವೆಯ ಹೆಸರಿನಲ್ಲಿ ಮತಾಂತರವನ್ನೂ ಮಾಡಿದರು’ ಎಂದು ಆರ್‌ಎಸ್‌ಎಸ್ ಮುಖಂಡ ಮಂಗೇಶ್ ಭೇಂಡೆ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ (ಪ್ರ.ವಾ., ಡಿ. 2).

ಹಾಗಾದರೆ ತೆರೆಸಾ ಕಾಲದಲ್ಲಿ ಬಡತನ ಇರಲಿಲ್ಲವೇ? ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಈಗಲೂ ಕೋಟ್ಯಂತರ ಮಂದಿ ಬಡತನ ಅನುಭವಿಸುತ್ತಿಲ್ಲವೇ? ಹಿಂದೆ, ನಮ್ಮ ದೇಶ ದಶಕಗಳ ಕಾಲ ಆಹಾರಕ್ಕಾಗಿ ಅಮೆರಿಕದ ಎದುರು ಅಂಗಲಾಚುತ್ತಿರಲಿಲ್ಲವೇ?

ಈಗಲೂ ಬಿಜೆಪಿ ಸರ್ಕಾರ ನಾನಾ ಕಾರಣಕ್ಕಾಗಿ ವಿದೇಶಗಳ ಸಹಾಯಕ್ಕಾಗಿ ಮೊರೆ ಹೋಗುತ್ತಿಲ್ಲವೇ? ಇದರಿಂದ ದೇಶದ ಮಾನ ಹರಾಜಾಗಲಿಲ್ಲವೇ?

ಮದರ್ ತೆರೆಸಾ ಅವರು ಕೋಲ್ಕತ್ತದ ಕೊಳೆಗೇರಿಗಳಲ್ಲಿ ದಶಕಗಳ ಕಾಲ ಕಡು ಬಡವರು, ಕುಷ್ಠ ರೋಗಿಗಳ ಸೇವೆ ಮಾಡುತ್ತಿದ್ದುದನ್ನು ಕಂಡು ವಿಶ್ವವೇ ಬೆರಗಾಗಿತ್ತು. ಹೀಗಿರುವಾಗ ಆರ್‌ಎಸ್‌ಎಸ್‌ ನಾಯಕರೊಬ್ಬರು ಯಾವ ಆಧಾರದ ಮೇಲೆ ಈಗ ಈ ಆರೋಪಗಳನ್ನು ಮಾಡುತ್ತಿದ್ದಾರೆ? ತೆರೆಸಾ ನಿಧನರಾದ 20 ವರ್ಷದ ನಂತರ ಅವರ ವಿರುದ್ಧ ದೋಷಾರೋಪ ಮಾಡುವುದು ಅಪ್ರಸ್ತುತವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT