ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠದೊಳಗಣ ರಾಜಕಾರಣ

Last Updated 14 ಜನವರಿ 2015, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ಮೂರುಸಾವಿರಮಠ ತನ್ನ ಎಲ್ಲೆಗಳನ್ನು ಮೀರಿ ಸರ್ವಧರ್ಮ ಸಮನ್ವ­ಯದ ಹಾದಿಯಲ್ಲಿ ಸಾಗಿ ಬಂದದ್ದಕ್ಕೆ ಅನೇಕ ನಿದರ್ಶನಗಳೇ ಇವೆ. ಜೊತೆಗೆ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ ಮಠವಿದು.

ಬರಗಾಲ­ದಲ್ಲಿ ಲಕ್ಷಾಂತರ ಜನರಿಗಾಗಿ ಗಂಜಿ ಕೇಂದ್ರಗಳನ್ನು ತೆರೆದ ಮಠ. ಆದರೆ ಮಹಾನಗರದ ಹೃದಯ ಭಾಗದಲ್ಲೇ ಇರುವ ಈ ಮಠದ ಅಗಣಿತ ಆಸ್ತಿ–ಸಂಪತ್ತುಗಳ ಲವಲವಿಕೆಗಳೇ ಹೆಚ್ಚಾಗಿ ಅದರ ಮೂಲಭೂತ ಮೌಲ್ಯಗಳು ಬಿದ್ದು­ಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಈ ಸಂಪತ್ತಿನ ಗುರುತ್ವಾಕರ್ಷಣೆಗೆ ಸ್ವಾಮಿಗಳು ಮಾತ್ರವಲ್ಲದೇ, ಭಕ್ತರೂ ಒಳಗಾಗಿರುವುದು ದುರಂತ. ಮೂರುಸಾವಿರಮಠದ ಚಾರಿತ್ರಿಕ ಒಲವು–­ನಿಲುವುಗಳು ಮುಂದುವ­ರಿ­ಯ­­ಬೇಕಾದರೆ ‘ಮಠದೊಳಗಣ ರಾಜಕಾ­ರಣ’­ವನ್ನು ಮೀರಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣಾತ್ಮಕ ಮೌಲ್ಯಗಳತ್ತ ದುಡಿಯ­ಬಲ್ಲ ಸಮರ್ಥ­ರನ್ನು ಆಯ್ಕೆ ಮಾಡುವುದೇ ಸೂಕ್ತ.

ಹಿಗ್ಗಾಮುಗ್ಗಾ ಕೈರಟ್ಟೆಯ ಬಲದ ಹಗ್ಗಜಗ್ಗಾಟವೇ ಮುಂದುವರಿದರೆ, ಅದರಲ್ಲಿ ಮಠದ ಹೆಸರೇ ಮುಗ್ಗುಸಾಗುವುದು ತಪ್ಪಲಾರದ ದುರಂತ. ಶರಣಸಿದ್ಧಾಂತದ ಅಡಿಗಲ್ಲಿನ ಮೇಲೆ ಮನುಕುಲದ ಸೇವೆ ಮಾಡಬಲ್ಲ ಸಮರ್ಥರು ಇದ್ದೇ ಇದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT