ಹೊಸಕೆರೆಹಳ್ಳಿ ಕೆರೆಕೋಡಿಯಿಂದ ಕೃ.ರಾ. ಮಾರುಕಟ್ಟೆ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ, ಶಿವಾಜಿನಗರಕ್ಕೆ ಹೋಗುವ 43ಸಿ, 43ಜೆ, 34ಸಿ ಬಸ್ಸುಗಳು ನಿಗದಿತ ಸಮಯಕ್ಕೆ ಹೊರಡುವುದೂ ಇಲ್ಲ, ಬರುವುದೂ ಇಲ್ಲ. ಅವು ಡ್ರೈವರ್, ಕಂಡಕ್ಟರ್‌ಗಳ ಮರ್ಜಿಯಂತೆ ಹೋದಾಗ ಹೋಗುತ್ತವೆ, ಬಂದಾಗ ಬರುತ್ತವೆ. ಈ ಬಗ್ಗೆ ಕತ್ರಿಗುಪ್ಪೆ, ದೀಪಾಂಜಲಿ ನಗರ, ಬನಶಂಕರಿ ಡಿಪೋಗಳ ಮುಖ್ಯಸ್ಥರಿಗೆ ಲಿಖಿತ ದೂರು ಕೊಟ್ಟಿದ್ದರೂ ಈವರೆಗೆ ಯಾವುದೇ ಬದಲಾವಣೆ ಆಗಿಲ್ಲ.

ಈ ನಡುವೆ ಬೆಳಗ್ಗೆ 7.30 ಮತ್ತು 9.30ಕ್ಕೆ ಕೆರೆಕೋಡಿಯಿಂದ ಹೊರಡುತ್ತಿದ್ದ 43ಸಿ ಬಸ್ಸಿನ ಸಮಯವನ್ನು ಪ್ರಯಾಣಿಕರ ಕೋರಿಕೆ ಇಲ್ಲದಿದ್ದರೂ ಏಕಪಕ್ಷೀಯವಾಗಿ ಬದಲಿಸಿ 8.30 ಮತ್ತು 10.30ಕ್ಕೆ ಹೊರಡಿಸುತ್ತಿರುವುದರಿಂದ ಕಚೇರಿ, ಕಾರ್ಖಾನೆ, ಶಾಲೆ, ಕಾಲೇಜುಗಳಿಗೆ ಹೋಗಲು ಇದೇ ಬಸ್ಸನ್ನು ಅವಲಂಬಿಸಿದ್ದವರಿಗೆ ಗಂಭೀರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ನಿವಾರಿಸಬೇಕಾಗಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.