ನಿತ್ಯವೂ ಹಲವು ರೈಲುಗಳು ಯಶವಂತಪುರ ನಿಲ್ದಾಣದಿಂದಲೇ ಹೊರಡುತ್ತವೆ ಮತ್ತು ಬರುತ್ತವೆ.ಎಚ್ಬಿಆರ್ ಬಡಾವಣೆಯ ಸಾರ್ವಜನಿಕರು ರೈಲು ಪ್ರಯಾಣಕ್ಕಾಗಿ ಯಶವಂತಪುರ ನಿಲ್ದಾಣವನ್ನು ಸಮಯಕ್ಕೆ ಸರಿಯಾಗಿ ತಲುಪಲು ರೈಲು ನಿಲ್ದಾಣದಿಂದ ಈ ಭಾಗಕ್ಕೆ ಬರಲು ನೇರ ಬಸ್ಸುಗಳ ವ್ಯವಸ್ಥೆ ಇಲ್ಲ.

ಎರಡು ಅಥವಾ ಮೂರು ಬಸ್ ಬದಲಿಸುವುದು ಅನಿವಾರ್ಯ ಆಗಿದೆ. ಆಟೊ ಪ್ರಯಾಣವು ರೈಲು ಟಿಕೆಟ್ ದರಕ್ಕಿಂತಲೂ ದುಬಾರಿ ಆಗುತ್ತದೆ.ದಯಮಾಡಿ ಪ್ರತಿ ಅರ್ಧ ಗಂಟೆಗೆ ಒಮ್ಮೆ ಒಂದು ಬಸ್ ಸರ್ವಿಸನ್ನು ಈ ಕೆಳಗೆ ವಿವರಿಸುವ ಮಾರ್ಗ ಮೂಲಕ ಚಲಿಸುವ ವ್ಯವಸ್ಥೆ ಮಾಡಿಸಬೇಕಾಗಿ ವಿನಂತಿ ಮಾಡುತ್ತೇವೆ.

ಮಾರ್ಗ: ಕಲ್ಯಾಣನಗರ ಬಸ್ ನಿಲ್ದಾಣ, ಹೆನ್ನೂರು ಸರ್ಕಲ್, ನಾಗವಾರ ಸರ್ಕಲ್ (ರಿಂಗ್ ರೋಡ್), ಈರಣ್ಣಪಾಳ್ಯ, ಹೆಬ್ಬಾಳ, ರಿಂಗ್ರೋಡಿನಲ್ಲಿ ಮುಂದೆ ಹೋಗಿ (ಎಡಕ್ಕೆ) ನಾಗಶೆಟ್ಟಿಹಳ್ಳಿ, ಸಂಜಯನಗರ, ಅಶ್ವಥನಗರ, ಬಲಕ್ಕೆ ತಿರುಗಿ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು ಸ್ಟಾಪು, ಯಶವಂತಪುರ ಸರ್ಕಲ್, ನೇರ ಹೋಗಿ ಯಶವಂತಪುರ ರೈಲ್ವೆಸ್ಟೇಶನ್ ಒಂದನೇ ಪ್ಲಾಟ್ ಫಾರ್ಮ್ ಎದುರು (ಆಫೀಸ್ ಎದುರು) ಅಲ್ಲಿಂದ ಹಿಂತಿರುಗಿ ಯಶವಂತಪುರ ಬಿ,ಎಂ.ಟಿ.ಸಿ. ಬಸ್ ನಿಲ್ದಾಣಕ್ಕೆ ಕೊನೆ. ಇದೇ ಮಾರ್ಗದಲ್ಲಿ ಹಿಂದಿರುಗುವ ವ್ಯವಸ್ಥೆಯೂ ಆದರೆ ಉಪಕಾರವಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.