PHOTOS | ದೇಶಭಕ್ತಿ ಮೂಡಿಸುವ ಗಣರಾಜ್ಯೋತ್ಸವ ಪೂರ್ವಾಭ್ಯಾಸದ ಝಲಕ್!
ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಭಾರಿ ಸಿದ್ಧತೆಗಳು ನಡೆಯುತ್ತಿದೆ. ಕೋವಿಡ್-19 ಸುರಕ್ಷತಾ ನಿಮಯಗಳು ಕಟ್ಟುನಿಟ್ಟಿನಿಂದ ಪಾಲನೆಯಾಗಲಿರುವುದರಿಂದ ಈ ಬಾರಿ ಪರೇಡ್ ವೈಭವದಲ್ಲಿ ಅಲ್ಪ ಕಡಿತವುಂಟಾಗಲಿದೆ. ಆದರೂ ಪೂರ್ವಾಭ್ಯಾಸದ ಸಿದ್ಧತೆಯಲ್ಲಿ ಕಿಂಚಿತ್ತೂ ರಾಜಿಗೆ ತಯಾರಾಗಿಲ್ಲ. ಈ ಕುರಿತು ದೇಶಭಕ್ತಿ ಮೂಡಿಸುವ ರೋಚಕ ಚಿತ್ರಗಳ ಸಂಗ್ರಹವನ್ನು ಕೊಡಲಾಗಿದೆ. (ಚಿತ್ರ ಕೃಪೆ: ಎಎಫ್ಪಿ)
Republic Day | Republic day parade | Indian Army |ಸ್ವಾವಲಂಬಿ ಭಾರತ; ಕೋವಿಡ್-19 ಲಸಿಕೆ ಸೂಚಿಸುವ ಸ್ತಬ್ಧಚಿತ್ರ
ನವಿಲು ನೃತ್ಯದ ಪೂರ್ವ ತಯಾರಿ
ಎನ್ಎಸ್ಜಿ ಕಮಾಂಡೊಗಳ ಹದ್ದಿನ ಕಣ್ಣು
ಭಾರತೀಯ ಸೇನೆಯ ಟ್ಯಾಂಕ್ (ಯುದ್ಧ ವಾಹನ)
ಉತ್ತರ ಪ್ರದೇಶದ ಸ್ತಬ್ಧಚಿತ್ರ
ಭಾರತೀಯ ವಾಯುಪಡೆಯ ವೈಮಾನಿಕ ಕಸರತ್ತು
ಗಡಿ ಕಾಯುವ ಬಿಎಸ್ಎಫ್ ಯೋಧರ ಪಥ ಸಂಚಲನ
ಕೇರಳದ ತೆಯ್ಯಂ
ಭಾರತೀಯ ಸೇನೆಯ ಯುದ್ಧ ವಾಹನ
ಎನ್ಎಸ್ಜಿ ಕಮಾಂಡೊಗಳ ಪೂರ್ವಾಭ್ಯಾಸ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ತಮಿಳುನಾಡು ಪಟಾಕಿ ಕಾರ್ಖಾನೆ ಸ್ಫೋಟ; ಮನಕಲಕುವ ಚಿತ್ರಗಳು
ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸತ್ತೂರು ಬಳಿ ಖಾಸಗಿ ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವಾರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ತಂಡ ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು. ಚಿತ್ರ ಕೃಪೆ (ಪಿಟಿಐ)
Fire crackers | Fire accident | Tamil Nadu |ಸ್ಫೋಟದ ತೀವ್ರತೆಗೆ ನೆಲಸಮವಾದ ಪಟಾಕಿ ಕಾರ್ಖಾನೆ
ಬೆಂಕಿ ನಂದಿಸಲು ಅಗ್ನಿಶಾಮಕ ದಳದ ನೆರವು
ಪಟಾಕಿ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿರುವ ಮಹಿಳಾ ಕಾರ್ಮಿಕರು
ಪೊಲೀಸರಿಂದ ತನಿಖೆ ಆರಂಭ
ಪಟಾಕಿ ತಯಾರಿಸಲು ರಾಸಾಯನಿಕ ಬೆರೆಕೆ ವೇಳೆ ಸಂಭವಿಸಿದ ಅಗ್ನಿ ಅವಘಡ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಕಾರ್ಮಿಕರ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ಸಂಭವಿಸಿದ ದುರಂತದಲ್ಲಿ ಹಲವಾರು ಮೃತಪಟ್ಟಿದ್ದಾರೆ. 600ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಹಗಲಿರುಳು ರಕ್ಷಣಾ ಕಾರ್ಯಾಚರಣೆಯಲ್ಲಿನಿರತವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಡ್ರೋನ್ ಹಾಗೂ ರಿಮೋಟ್ ಸೆನ್ಸಿಂಗ್ ಬಳಸಲಾಗುತ್ತಿದೆ. ದಿಢೀರ್ ಆಗಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ತಪೋವನದ ಸುರಂಗದಲ್ಲಿ ಅನೇಕ ಕಾರ್ಮಿಕರು ಸಿಲುಕಿದ್ದರು. ಸಂತ್ರಸ್ತರಿಗೆ ಆಹಾರವನ್ನು ಹೆಲಿಕಾಪ್ಟರ್ ಮೂಲಕ ಸೇನೆಯು ಪೂರೈಸಿದೆ.
Uttarakhand | avalanche | Flood | rescue operations |ತಪೋವನ ಸುರಂಗದಲ್ಲಿ ಹಗಲು-ರಾತ್ರಿ ರಕ್ಷಣಾ ಕಾರ್ಯಾಚರಣೆ
ರೈನಿ ಗ್ರಾಮದಲ್ಲಿ ಬಿಆರ್ಒ ಪಡೆಯಿಂದ ರಸ್ತೆ ಪುನಃಸ್ಥಾಪಿಸುವ ಪ್ರಯತ್ನ
ರಕ್ಷಣಾ ಸಿಬ್ಬಂದಿಗಳು ಹಾಗೂ ಸಂತ್ರಸ್ತರಿಗೆ ಆಹಾರ ತಯಾರಿಸುತ್ತಿರುವ ಸ್ವಯಂ ಸೇವಕರು
ಕಾಣೆಯಾದ ಕುಟುಂಬ ಸದಸ್ಯರ ಆಗಮನಕ್ಕಾಗಿ ಕಾಯುತ್ತಿರುವ ಸಂಬಂಧಿಕರು
ಸುರಂಗದೊಳಗೆ ಇನ್ನು ಅನೇಕ ಮಂದಿ ಸಿಲುಕಿರುವ ಶಂಕೆ
ಗಡಿ ರಸ್ತೆ ಸಂಘಟನೆಯಿಂದ ಮುಂದುವರಿದ ಅವಿರತ ಪ್ರಯತ್ನ
ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಮಾಡುತ್ತಿರುವ ಸ್ಥಳೀಯರಿಂದ ಪ್ರತಿಭಟನೆ
ಉತ್ತರಾಖಂಡ ಹಿಮ ಪ್ರವಾಹದ ಬಳಿಕ ಈಗಿನ ದೃಶ್ಯ
ರಕ್ಷಣಾ ಕಾರ್ಯಾಚರಣೆಗೆ ವಿವಿಧ ರೀತಿಯ ಯಂತ್ರಗಳ ಬಳಕೆ
ಈಗಲೂ ಸುರಂಗದಲ್ಲಿ ಸಿಲುಕಿ ಬಿದ್ದಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಉತ್ತರಾಖಂಡದಲ್ಲಿ ಹಿಮಪ್ರವಾಹ; ತಪೋವನದಲ್ಲಿ ಈಗಿನ ಪರಿಸ್ಥಿತಿ ಹೇಗಿದೆ?
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿರುವ ಹಿಮ ಕುಸಿತದಿಂದ ದಿಢೀರ್ ಉಂಟಾದ ಪ್ರವಾಹಕ್ಕೆ ಸಿಲುಕಿ ಹಲವರು ಮೃತಪಟ್ಟಿದ್ದಾರೆ. ಸೇನೆ ಹಾಗೂ ವಿಪತ್ತು ನಿರ್ವಹಣೆ ಪಡೆಯ ಜಂಟಿ ರಕ್ಷಣಾ ಕಾರ್ಯಾಚರಣೆ ಈಗಲೂ ಜಾರಿಯಲ್ಲಿದೆ. ತಪೋವನದ ಬಳಿ ಸುರಂಗವೊಂದರಲ್ಲಿ ಸಿಲುಕಿದ್ದ 30 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಪ್ರಸ್ತುತ ಪ್ರದೇಶದಲ್ಲಿ ಈಗಿನ ಸ್ಥಿತಿಗತಿಯ ಬಗ್ಗೆ ಚಿತ್ರಗಳ ಮೂಲಕ ವಿವರಿಸಲಾಗಿದೆ.
Uttarakhand | avalanche | Flood | Power plant | Tunnel |ತಪೋವನ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ
ತಪೋವನ ಸುರಂಗದ ಒಳಗಿನ ದೃಶ್ಯ
ಹಿಮ ಕುಸಿತದಿಂದಾಗಿ ಏಕಾಏಕಿ ಉಕ್ಕಿ ಹರಿದ ನದಿ
ತಪೋವನ ಸುರಂಗ ಸಮೀಪದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗಳು
ತಪೋವನದಲ್ಲಿ ರಕ್ಷಣಾ ಕಾರ್ಯಾಚರಣೆಯ ವಾಹನ ಕೆಸರಿನಲ್ಲಿ ಸಿಲುಕಿರುವ ದೃಶ್ಯ
ಹಿಮಪ್ರವಾಹದ ಬಳಿಕದ ಕಣಿವೆಯ ದೃಶ್ಯ
ತಮ್ಮ ಜೀವವನ್ನೇ ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಐಟಿಬಿಪಿ ಯೋಧರು
ಐಟಿಬಿಪಿ ಪಡೆಯಿಂದ ರಕ್ಷಣಾ ಕಾರ್ಯಾಚರಣೆ
ದೇಶವನ್ನೇ ಬೆಚ್ಚಿ ಬೀಳಿಸಿದ ನೈಸರ್ಗಿಕ ವಿಪತ್ತು
ಹಾನಿಗೊಳಗಾಗಿರುವ ತಪೋವನದ ವಿದ್ಯುತ್ ಯೋಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಉತ್ತರಾಖಂಡದಲ್ಲಿ ಹಿಮಪಾತ: ವಿಪತ್ತು ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಹಲವರ ರಕ್ಷಣೆ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಹಿಮ ಕುಸಿತದಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ ಹಲವರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಕಣ್ಮರೆಯಾದವರನ್ನು ಪತ್ತೆಮಾಡಲು ಶೋಧಕಾರ್ಯ ಮುಂದುವರಿದಿದೆ. ಋಷಿಗಂಗಾ ನದಿಯ ದಂಡೆಯಲ್ಲಿರುವ ರೈನಿ ಪ್ರದೇಶ ದಲ್ಲಿ ಋಷಿಗಂಗಾ ಜಲವಿದ್ಯುತ್ ಯೋಜನೆಯ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಈ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ತಪೋವನದ ಬಳಿ ಸುರಂಗವೊಂದರಲ್ಲಿ ಸಿಲುಕಿದ್ದ 30 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ.
avalanche | Flood | Uttarakhand | rescue operations | Climate change |ಉತ್ತರಾಖಂಡದಲ್ಲಿ ನೈಸರ್ಗಿಕ ವಿಕೋಪಕ್ಕೆ ಅಪಾರ ನಾಶ-ನಷ್ಟ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಹಿಮಪ್ರವಾಹ
ವಿಪತ್ತು ನಿರ್ವಹಣಾ ಪಡೆಯಿಂದ ರಕ್ಷಣಾ ಕಾರ್ಯಾಚರಣೆ
ಈಗಾಗಲೇ ಹಲವಾರು ಕಾರ್ಮಿಕರನ್ನು ರಕ್ಷಿಸಲಾಗಿದೆ.
ತಪೋವನದ ಬಳಿ ಸುರಂಗವೊಂದರಲ್ಲಿ ಸಿಲುಕಿದ್ದ 30 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ
ಹಿಮ ನದಿ ಕುಸಿತದ ಹಿಂದಿನ ಕಾರಣದ ಅಧ್ಯಯನಕ್ಕಾಗಿ ತಂಡ ರಚಿಸಲಾಗಿದೆ.
2013ರಲ್ಲೂ ಸಂಭವಿಸಿತ್ತು ಹಿಮಪಾತ ದುರಂತ
ಹಿಮ ಕುಸಿತದಿಂದ ಏಕಾಏಕಿ ನೀರು ಉಕ್ಕಿ ಹರಿದು ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು.
ರಿಷಿಗಂಗಾ ಜಲವಿದ್ಯುತ್ ಯೋಜನೆಗೆ ಹಾನಿ
ಹಲವು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ
ಐಟಿಬಿಪಿ ತಂಡದಿಂದಲೂ ರಕ್ಷಣಾ ಕಾರ್ಯಾಚರಣೆ
ಸುರಂಗದಲ್ಲಿ ತೆರವು ಕಾರ್ಯಾಚರಣೆ ಜಾರಿಯಲ್ಲಿದೆ.
ಉತ್ತರಾಖಂಡ ಪ್ರವಾಹದ ಭಯಾನಕ ದೃಶ್ಯ
ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯಿಂದ ಹಿಮ ಕುಸಿತವುಂಟಾಗಿರುವ ಸಾಧ್ಯತೆ