ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು

ರಾಜ್ಯದೆಲ್ಲೆಡೆ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ರಾಜ್ಯದ ಹೊರಗೂ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಬಿಹಾರದಲ್ಲಿ ಚುನಾವಣೆಯಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕರ್ನಾಟಕ ಮೂಲದ ಸಿಆರ್‌ಪಿಎಫ್ ಯೋಧರು ಇಂದು ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿದ್ದಾರೆ.ಛಪರಾ ಜಿಲ್ಲೆಯ ಸರ್ಕಾರಿ ಶಾಲಾ ಆವರಣದಲ್ಲಿ 97ನೇ ಬೆಟಾಲಿಯನ್ ಸಿಆರ್‌ಪಿಎಫ್ ಯೋಧರು ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ.ಬೆಂಗಳೂರಿನವರೇ ಆದ ಅಸಿಸ್ಟೆಂಟ್ ಕಮಾಂಡೆಂಟ್ ಅರ್ಚನಾ ನೇತೃತ್ವದಲ್ಲಿ (ಡಿಎಸ್‌ಪಿ) 22 ಜನ ಕನ್ನಡಿಗ ಯೋಧರಿಂದ ತಂಡ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಕಳೆದ ವರ್ಷವು ಭೂಪಾಲ್‌ನಲ್ಲಿದ್ದಾಗ 35 ಜನರಿದ್ದ ಕನ್ನಡಿಗ ಯೋಧರು ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದರು.ರಾಜ್ಯೋತ್ಸವ ಎಂದರೇನೇ ಎಲ್ಲಿಲ್ಲದ ಖುಷಿ. ನಮ್ಮ ತಂಡದಲ್ಲಿದ್ದ ಎಲ್ಲರೂ ನಿದ್ದೆ ಬಿಟ್ಟು ಸ್ವೀಟ್, ಕೇಕ್ ತಂದು ಆಚರಣೆಗೆ ಸಿದ್ಧತೆ ಮಾಡಿದ್ದೆವು. ಕನ್ನಡಿಗರಲ್ಲದೆ ಹೊರಗಿನ ರಾಜ್ಯದವರೂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಸಿಹಿ ಹಂಚಿ ಕುಣಿದಾಡಿದೆವು. ಎಲ್ಲೇ ಇದ್ರೂ ಕೂಡ ಇದೇ ರೀತಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ಸಿಗಲಿ. ಚಾಮುಂಡೇಶ್ವರಿ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ ಎನ್ನುತ್ತಾರೆ ದಾವಣಗೆರೆ ಜಿಲ್ಲೆ ಅದಡಿಯ ಸಿಆರ್‌ಪಿಎಫ್ ಯೋಧ ಹನುಮಂತಪ್ಪ ಸಿ.ಎಚ್.ಬಸವರಾಜು, ಸಿದ್ದಪ್ಪ, ಭೀಮ್‌ಸಿ ತೇಲಿ, ಈರಣ್ಣ, ಬಸವಂತಪ್ಪ, ಸಂಗಪ್ಪ, ರಾಜೇಂದ್ರ, ವಿಜಯ್ ಜಾಧವ್, ಶಶಿಕುಮಾರ್, ಬಿ ರೆಡ್ಡಿ, ಸುದರ್ಶನ್, ಅನಿಲ್ ಕುಮಾರ್, ಸುರೇಶ್ ವಡ್ಡರ್, ದೇವರಾಜ್, ರಾಜೇಶ್ ಪೂಜಾರಿ, ಪತ್ತಿನಾಯಕ್, ಉಮೇಶ್ ಕೆ.ಟಿ., ಕೃಷ್ಣ ನಾಯಕ್, ವೀರಪ್ಪ, ಮಹಮ್ಮದ್ ಗೌಸ್, ಮಂಜು ಸಿ. ಎನ್ನುವ ತಂಡದಲ್ಲಿದ್ದ ಕನ್ನಡಿಗರು ಇದ್ದರು.
Last Updated 1 ನವೆಂಬರ್ 2020, 13:50 IST
ಅಕ್ಷರ ಗಾತ್ರ
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ADVERTISEMENT
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು
ಸಿಆರ್‌ಪಿಎಫ್ ಯೋಧರಿಂದ ಬಿಹಾರದಲ್ಲೂ ಪಸರಿಸಿದ ಕನ್ನಡದ ಕಂಪು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT