ಅದು ಬಯಲು ಪ್ರದೇಶದ ಕುರುಚಲು ಕಾಡುಗಳ ಸಮೂಹ. ಪ್ರಕೃತಿಯ ಮಡಿಲಿನ ರಮಣೀಯ ಸ್ಥಳ. ಪ್ರಕೃತಿ ಪ್ರಿಯರಿಗೆ, ಚಾರಣಿಗರಿಗೆ ಮನೋಲ್ಲಾಸ ನೀಡುವ ತಾಣ. ಹಸಿರು ಹೊದ್ದು ಮಲಗಿರುವಂತೆ ಕಾಣುವ ಈ ಸುಂದರ ತಾಣವೇ ಮದನಿಂಗನ ಗುಡ್ಡ. ಇದಕ್ಕೆ ಮದನಿಂಗನ ಕಣಿವೆ ಎಂದೂ ಕರೆಯುತ್ತಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಿಂದ ಪೂರ್ವದಿಕ್ಕಿನಲ್ಲಿ 6.ಕಿ.ಮೀ. ದೂರವಿರುವ ಗುಡ್ಡಗಳ ಸರಣಿಯಲ್ಲಿದೆ ಈ ಕಣಿವೆ. ಕಡೇ ಕಲ್ಲು ಗುಡ್ಡ, ಸಿಡ್ಲೇಗುಡ್ಡ, ಹಬ್ಬಿಗೆಗುಡ್ಡ, ದೇವದಾರೆಗುಡ್ಡ.. ಹೀಗೆ ಹಲವು ಗುಡ್ಡಗಳ ಸಮೂಹದ ಜತೆಗಿದೆ. ಇವುಗಳ ಜತೆಗೆ ಹಲಸಿನ ದೊಣೆ, ಅಕ್ಕನಾರಹಳ್ಳ ಎಂಬ ಹೆಸರಿನ ಕಣಿವೆಗಳಿವೆ. ಬಯಲುಸೀಮೆ ಪ್ರದೇಶವಾದರೂ, ಮಳೆ ಮತ್ತು ಚಳಿಗಾಲದಲ್ಲಿ ಅರೆ ಮಲೆನಾಡಿನಂತೆ ಕಾಣುವ, ಹಸಿರ ಹೊದಿಕೆಗಳಿಂದ ಕಂಗೊಳಿಸುವ ಬೆಟ್ಟಗುಡ್ಡಗಳ ಸಾಲು ಕಣ್ಣುಗಳಿಗೆ ತಂಪು ನೀಡುತ್ತದೆ. ಬೆಟ್ಟಗಳ ನಡುವಿನ ರಸ್ತೆಯಲ್ಲಿ ಸಾಗುತ್ತಿದ್ದರೆ ಕಿವಿಗಳಿಗೆ ಹಕ್ಕಿಗಳ ಗಾನದ ಇಂಪು.

ಮದನಿಂಗನಕಣಿವೆ, ಇದೊಂದು ಸುತ್ತುಕಣಿವೆ. ಮಳೆಗಾಲದಲ್ಲಿ ಇಲ್ಲಿ ಸುತ್ತಾಡುತ್ತಿದ್ದರೆ, ಮಡಿಕೇರಿಯ ಪ್ರತಿರೂಪ ಕಂಡಂತಾಗುತ್ತದೆ. ಇನ್ನು ಚಳಿಗಾಲದಲ್ಲಿ ಕಣಿವೆ ಸುತ್ತಮುತ್ತಾ ಬೀಳುವ ಮಂಜಿನಹನಿ, ಮತ್ತೊಂದು ರಮಣೀಯ ಲೋಕವನ್ನು ಅನಾವರಣಗೊಳಿಸುತ್ತದೆ. ಸಾಹಿತ್ಯಾಸಕ್ತರ ಸೃಜನಶೀಲತೆಗೆ ಸ್ಫೂರ್ತಿದಾಯಕವಾಗಿರುವ ಕಣಿವೆಯನ್ನು, ಸಾಹಿತಿಗಳಾದ ತೀ.ನಂ.ಶ್ರೀಕಂಠಯ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಮಾಸ್ತಿ ವೆಂಕಟೇಶ ಐಯ್ಯಂಗಾರ್, ಆರ್.ಬಸವರಾಜ್, ಎಂ.ವಿ.ಎನ್, ಎಚ್. ಎಸ್. ಎಸ್., ಎಸ್.ಚಂದ್ರಶೇಖರ್ ಅವರಂಥವರು ಈ ಕಣಿವೆಯ ಪ್ರಕೃತಿ ಸೌಂದರ್ಯವನ್ನು ತಮ್ಮ ಸಾಹಿತ್ಯದ ವಸ್ತುಗಳನ್ನಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಹಿತ್ಯದ ಮೂಲಕ ಇಲ್ಲಿನ ಐತಿಹಾಸಿಕ ಘಟನೆಗಳೊಂದಿಗೆ ನಡೆದಿರುವ ವಿದ್ಯಮಾನಗಳನ್ನು ಮನೋಜ್ಞವಾಗಿ ನಾಡಿನ ಜನರಿಗೆ ಕಟ್ಟಿಕೊಟ್ಟಿದ್ದಾರೆ.

ಮದನಿಂಗನಗುಡ್ಡದಲ್ಲಿ ಅಪರೂಪದ ಸಸ್ಯರಾಶಿಗಳಿವೆ. ಆಯಾ ಕಾಲದಲ್ಲಿ ಕಾಡು ಬಿಕ್ಕೆ, ಕಮರ, ಕೇದಿಗೆ, ಜಾಲಗಿರಿ ಹೂ ಪ್ರಕೃತಿಪ್ರಿಯರನ್ನು ಕೈ ಬೀಸಿ ಕರೆಯುತ್ತವೆ. ಜೊತೆಗೆ ಜಾಣೆ ಮರ, ತ್ರಬ್ಶೀ ಮರ, ತರೇದ ಗಿಡ, ಲಾವಂಚ ಜಾತಿಗೆ ಸೇರಿದ ಹುಲ್ಲು, ಅಂಕಾಲೆ, ಸುಜ್ಜಲೀ ಹೀಗೆ ಹಲವಾರು ಸಸ್ಯ ಸಂಪತ್ತು ಇದೆ. ಈ ಭಾಗದಲ್ಲಿ ನವಿಲು, ಕರಡಿ ಹಾಗೂ ಚಿರತೆಗಳ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವುದು ಕಾಡಂಚಿನ ಜಮೀನುಗಳ ರೈತರ ವಿವರಣೆ.

ಈ ಮದನಿಂಗನ ಕಣಿವೆ ನೋಡಲು ಈಚೆಗೆ ಹೆಚ್ಚು ಹೆಚ್ಚು ಹವ್ಯಾಸಿ ಸೈಕಲ್ ಸವಾರರು, ಬೈಕ್ ರೈಡರ್‌ಗಳು ವಾರಾಂತ್ಯದಲ್ಲಿ ವಿಹಾರಕ್ಕಾಗಿ ಬರುತ್ತಿದ್ದಾರೆ. ಆದರೆ ಈ ಕಣಿವೆಯ ಗುಡ್ಡವನ್ನು ಹತ್ತುವುದು ಸಾಹಸವೇ!

ಕಾಯಕಲ್ಪ ಅಗತ್ಯವಿದೆ

ಇಂತಹ ಬಯಲು ನಾಡಿನ ಕುರುಚಲು ಕಾಡಿಗೆ ಒಂದು ಕಾಯಕಲ್ಪ ಬೇಕೇ ಬೇಕು ಎನ್ನುವುದು ಇಲ್ಲಿಯ ನಾಗರಿಕರ, ಪರಿಸರ ಪ್ರಿಯರ ಮನವಿ. ಅರಣ್ಯ ಇಲಾಖೆಯವರು ಇಲ್ಲಿ ಹೆಚ್ಚು ಹೆಚ್ಚು ಗಸ್ತು ನಡೆಸಿ ಈ ಸುಂದರ ಕಾಡನ್ನು ರಕ್ಷಿಸಬೇಕು. ಜೊತೆಗೆ ಭೂತಪ್ಪನ ಗುಡಿ ಬಳಿ ನಡೆಯುವ ಗುಂಡು-ತುಂಡು ಪಾರ್ಟಿಗಳನ್ನು ನಿಲ್ಲಿಸಲೇಬೇಕು. ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಿ ಇದನ್ನು ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕು.

ಮೂಲಸೌಲಭ್ಯವೂ ಬೇಕು

ಪ್ರಕೃತಿ ಪ್ರಿಯರಿಗೆ, ಚಾರಣಿಗರಿಗೆ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಳೂ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸುತ್ತು ಕಣಿವೆಯಲ್ಲಿ ಓಡಾಡುವ ಬಸ್ಸುಗಳು ಸಿಕ್ಕಾಪಟ್ಟೆ ಹಾರನ್ ಮಾಡುತ್ತವೆ. ಇದರಿಂದ ವನ್ಯಮೃಗಗಳ ಚಟುವಟಿಕೆಗೆ ಭಂಗವಾಗುತ್ತದೆ. ಇದಕ್ಕೆ ನಿಷೇಧ ಹೇರಬೇಕು. ಕಾಡಿನ ನಡುವೆ ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿ, ಮಳೆ ನೀರು ಸಂಗ್ರಹಿಸುವ ಮತ್ತು ಇಂಗಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು.

ಇಂಥ ಅರಣ್ಯ ರಕ್ಷಣೆಯ ಕ್ರಮಗಳಿಂದ, ಗುಡ್ಡ ಮತ್ತು ಕಣಿವೆಗಳಲ್ಲಿನ ಸಸ್ಯ, ವನ್ಯ ಸಂಪತ್ತು ವೃದ್ಧಿಯಾಗುತ್ತದೆ. ಪರೋಕ್ಷವಾಗಿ ಬಯಲುಸೀಮೆ ಪ್ರದೇಶದ ಕೃಷಿ ಚಟುವಟಿಕೆಗೂ ನೆರವಾಗುತ್ತದೆ.

ಮದನಿಂಗನ ಕಣಿವೆ ಇತಿಹಾಸ

ಮದಲಿಂಗನಗುಡ್ಡ ತನ್ನದೇ ಆದ ವೈಶಿಷ್ಟ್ಯಕ್ಕೆ ಹೆಸರಾಗಿದೆ. ಕುಸ್ತಿಪಟು ಮದನಿಂಗ ಚಿಕ್ಕನಾಯಕನಹಳ್ಳಿಯ ಅಳಿಯ. ಮದುವೆಯಾದ ಮೊದಲ ವರ್ಷ ಏಕಾದಶಿ ಜಾತ್ರೆಯಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸುತ್ತಾನೆ. ವಾರಪೂರ್ತಿ ನಡೆಯುವ ಹಳೆಯೂರು ಆಂಜನೇಯ ಜಾತ್ರೆಯಲ್ಲಿ ಮಡದಿ ಹಾಗೂ ನಾದಿನಿ ಜೊತೆ ಜಾತ್ರೆಯಲ್ಲಿ ಸಂಭ್ರಮಿಸುತ್ತಾನೆ.

ತಮಾಷೆಗೆಂದು ಜಗಜಟ್ಟಿ ಮದನಿಂಗ ನಾದಿನಿಯನ್ನೂ ಮದುವೆ ಮಾಡಿಕೊಡುವಂತೆ ಅತ್ತೆಯನ್ನು ಕೇಳಿಕೊಳ್ಳುತ್ತಾನೆ. ಊರ ಎದುರು ಮೈಚಾಚಿಕೊಂಡಿರುವ ಗುಡ್ಡವನ್ನು ಹಿಮ್ಮುಖವಾಗಿ ಹತ್ತಿ ಇಳಿದರೆ ಎರಡನೇ ಮಗಳನ್ನು ಕೊಡುವುದಾಗಿ ಅತ್ತೆ ಹೇಳುತ್ತಾಳೆ. ಸವಾಲು ಸ್ವೀಕರಿಸಿದ ಮದನಿಂಗ ಹಾಗೆ ಮಾಡುತ್ತಾನೆ. ಹಿಮ್ಮುಖವಾಗಿ ನಡೆದು ಗುರಿಯನ್ನು ತಲುಪುತ್ತಾನೆ. ಅಷ್ಟರಲ್ಲಿ ಆತನಿಗೆ ಅತೀವ ನೀರಡಿಕೆಯಾಗುತ್ತದೆ. ಆಗ ಅವರ ಬಳಿ ಇದ್ದದ್ದು ಕೇವಲ ಒಂದು ತಂಬಿಗೆ ನೀರು. ಅದನ್ನು ನಾದಿನಿಯ ಕೈಯಿಂದ ತೆಗೆದುಕೊಳ್ಳುವ ಭರಾಟೆ ಹಾಗೂ ರಸಿಕತೆಯ ಆತುರದಲ್ಲಿ ತಂಬಿಗೆ ಕೈಚೆಲ್ಲುತ್ತದೆ. ತಂಬಿಗೆಯಲ್ಲಿದ್ದ ನೀರು ಮಣ್ಣುಪಾಲಾಗುತ್ತದೆ. ಸುತ್ತಲು ಎಲ್ಲೂ ನೀರು ಸಿಗದಾಗುತ್ತದೆ.

‘ಅತೀವ ನೀರಡಿಕೆಯಿಂದ ಮದನಿಂಗ ಮಡಿಯುತ್ತಾನೆ’ ಎಂಬುದು ಮಾಸ್ತಿಯವರು ಕಟ್ಟಿಕೊಟ್ಟಿರುವ ಕಥನ ಕಾವ್ಯ. ಮದನಿಂಗ ಸತ್ತ ಸುದ್ದಿಯನ್ನು ಕೇಳಿ ಅತ್ತೆ ಎದೆ ಒಡೆದುಕೊಂಡು ಸಾವನ್ನಪ್ಪುತ್ತಾಳೆ. ಗಂಡ ಹಾಗೂ ತಾಯಿಯ ಸಾವು ಕಂಡು ಮಡದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂಬುದು ಕಥೆಯಲ್ಲಿದೆ. ಈ ಕಥೆಗೆ ಪೂರಕ ಎಂಬಂತೆ ಸುತ್ತುಕಣಿವೆಯಲ್ಲಿ ಮದನಿಂಗನ ಶವ ಸಂಸ್ಕಾರ ಮಾಡಿದ ಊರಿಗೆ ಮದನಮಡು, ಅತ್ತೆಯ ಊರಿಗೆ ಅಜ್ಜಿಗುಡ್ಡೆ ಹಾಗೂ ಜಾಣೆಹಾರು ಎಂಬ ಹೆಸರಿನ ಊರುಗಳಿವೆ.

ಚಿತ್ರಗಳು: ಲೇಖಕರವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.