16 ವರ್ಷದ ನನ್ನ ಮಗ ಹುಡುಗಿಯಾಗಲು ಇಚ್ಛಿಸುತ್ತಿದ್ದಾನೆ ಮತ್ತು ಹಾಗೆಯೇ ಬದಲಾಗುತ್ತಿದ್ದಾನೆ. ಇದಕ್ಕೆ ಹಾರ್ಮೋನಿನ ಬದಲಾವಣೆ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಮನೆಯಲ್ಲಿ ನನ್ನ ಹೆಂಡತಿ, ಮಗಳು ಮತ್ತು ನನ್ನ ತಾಯಿ–ತಂದೆ ಇದನ್ನು ಒಪ್ಪಲು ತಯಾರಿಲ್ಲ. ನೆಂಟರಿಷ್ಟರ ನಡುವೆ ನಮಗೆ ಭಾರಿ ಮುಜುಗರ ಆಗುತ್ತಿದೆ. ಓದಿನಲ್ಲಿ ಬಹಳ ಮುಂದಿದ್ದ ಹುಡುಗ ಈಗ ಈ ಸಮಸ್ಯೆಯಿಂದ ಒದ್ದಾಡುತ್ತಿದ್ದಾನೆ. ಹೇಗಾದರೂ ಮಾಡಿ ಹುಡುಗಿಯಾಗಲು ಬಿಡಿ ಎಂದು ಪ್ರತಿದಿನ ನನ್ನ ಮತ್ತು ಅವನ ತಾಯಿ ಬಳಿ ಅಲವತ್ತುಕೊಳ್ಳುತ್ತಾನೆ. ‘ಹುಡುಗಿಯಾಗಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತೇನೆ. ಆಗ ಮುಂದೆ ಎಲ್ಲ ಸರ್ಟಿಫಿಕೇಟ್ಗಳಲ್ಲೂ ಹುಡುಗಿಯಾಗಿಯೇ ಉಳಿಯಲು ಸಾಧ್ಯವಾಗುತ್ತದೆ. ಅದರಿಂದ ಹೆಸರನ್ನಾಗಲಿ ಅಥವಾ ಅದರಲ್ಲಿ ನಮೂದಿಸಿದ ಲಿಂಗವನ್ನಾಗಲಿ ಬದಲಿಸಬೇಕಾದ ಅಗತ್ಯ ಬರದು’ ಎನ್ನುತ್ತಾನೆ. ಸಾಮಾಜಿಕ, ಕೌಟುಂಬಿಕ ಒತ್ತಡಗಳ ನಡುವೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. 11 ವರ್ಷಗಳವರೆಗೆ ಸರಿಯಾಗಿಯೇ ಇದ್ದ ಮಗನ ವರ್ತನೆಯಲ್ಲಿ ಏಕಾಏಕಿ ಬದಲಾವಣೆ ಏಕಾಯಿತು? ಈ ಹಾರ್ಮೋನ್ಗಳು ಹೀಗೇಕೆ ಬದಲಾಗಿ ಎಲ್ಲರ ಬದುಕನ್ನೂ ತೊಂದರೆಗೆ ಸಿಲುಕಿಸುತ್ತವೆ? ಏನು ಮಾಡಿದರೆ ಮಗ ಮೊದಲಿನಂತೆ ಆಗಬಹುದು ಅಥವಾ ಈಗಿರುವ ಸಮಸ್ಯೆಯನ್ನು ಸೂಕ್ತವಾಗಿ ನಿಭಾಯಿಸಿ ಅವನು ಏಳ್ಗೆ ಸಾಧಿಸುವ ದಿಸೆಯಲ್ಲಿ ನಾವು ಯಾವೆಲ್ಲ ಕ್ರಮ ತೆಗೆದುಕೊಳ್ಳಬಹುದು ತಿಳಿಸುವಿರಾ ಸರ್ ?

-ಕರ್ಣಾನಂದ, ಯಲಚಿಗೋಡು

ನಿಮ್ಮೆಲ್ಲರ ಮಾನಸಿಕ ಬೇಗುದಿ ನನಗೆ ಅರ್ಥ ವಾಗುತ್ತದೆ. ಇದು ಬಹಳ ಸಂಕೀರ್ಣವಾದ, ಕೆಲವರ ಜೀವನದಲ್ಲಿ ಮಾತ್ರ ಬರುವ ಸಂದಿಗ್ಧ ಸ್ಥಿತಿ. ಇಂಥದ್ದಕ್ಕೆಲ್ಲ ಸುಲಭದಲ್ಲಿ ಪರಿಹಾರವನ್ನು ಸೂಚಿಸುವುದು ಸಾಧ್ಯವಾಗಲಾರದು ಅಥವಾ ಬಹಳ ದೀರ್ಘವಾದ ಸಮಯ ಹಾಗೂ ಸಂವಹನ ಬೇಕಾಗಬಹುದು.

ನಿಜ, ಇದು ಹದಿಹರೆಯದಲ್ಲಿ ಕೆಲವು ಹುಡುಗರು ಅಥವಾ ಹುಡುಗಿಯರ ದೇಹದಲ್ಲಿ ಸೃಜಿಸುವ ಹಾರ್ಮೋನಿನಲ್ಲಿ ಆಗುವ ತೀವ್ರ ಬದಲಾವಣೆಯಿಂದ ಅನಿಯಂತ್ರಿತವಾಗಿ ಉಂಟಾಗುವ ಸಮಸ್ಯೆ. ಸಾಮಾನ್ಯವಾಗಿ ಹಾರ್ಮೋನಿನಲ್ಲಾಗುವ ಬದಲಾವಣೆಯಿಂದ ಹುಡುಗ ಗಂಡಾಗಿಯೂ ಹುಡುಗಿ ಹೆಣ್ಣಾಗಿಯೂ ದೈಹಿಕವಾಗಿ, ಮಾನಸಿಕವಾಗಿ ಬದಲಾಗುತ್ತಾರೆ. ಈ ಪ್ರಕೃತಿ ಸಹಜ ಕ್ರಿಯೆಗೆ ನಾವೆಲ್ಲ ಸಂಭ್ರಮಿಸುತ್ತೇವೆ.

ಆದರೆ, ಹದಿಹರೆಯದಲ್ಲಿ ಮಗ ಹೆಣ್ಣಾಗುವ ಹಾದಿಯಲ್ಲಿ ಅಥವಾ ಮಗಳು ಗಂಡಾಗುವ ಹಾದಿಯಲ್ಲಿ ಹೊರಡುವುದು ಮನೆಯವರಿಗೆ, ಪಾಲಕರಿಗೆ ಅಸಹನೀಯವಾಗುತ್ತದೆ. ವಿಪರೀತ ನೋವಾಗುತ್ತದೆ. ಸುಲಭವಾಗಿ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಅದು ವಿಕೃತಿ ಎಂದು ನಮಗೆ ಅನ್ನಿಸುತ್ತದೆ. ಹಾಗಂತ ನಿಸರ್ಗದ ವೈಚಿತ್ರ್ಯಗಳಿಗೆ, ಪ್ರಕೃತಿಯ ನಿಯಮಗಳಿಗೆ ನಮ್ಮಿಂದ ಏನೊಂದು ಬದಲಾವಣೆಯನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಎಲ್ಲವನ್ನೂ ಬಂದಂತೆ ಎದುರಿಸುವುದೇ ಜೀವನದಲ್ಲಿ ನಮಗಿರುವ ಸಾಧ್ಯತೆ. ಬಹುಶಃ ನಮ್ಮ ಬೆಳವಣಿಗೆಯ ಸಮಯದಲ್ಲಿಯೂ ನಮ್ಮೊಳಗಿನ ಹಾರ್ಮೋನಿನಲ್ಲಿ ಹೀಗೇನಾದರೂ ವೈಪರೀತ್ಯಗಳು ಆಗಿರುತ್ತಿದ್ದರೆ ನಾವೂ ಹೇಗೆ ಹೇಗೋ ಆಗಿರುತ್ತಿದ್ದೆವು, ಅಲ್ಲವೇ?

ನಿಮ್ಮ ಮಗ ಸಹ ಯಾರೊಂದಿಗೂ ಹೇಳಿಕೊಳ್ಳಲಾಗದಷ್ಟು, ಅರ್ಥ ಮಾಡಿಕೊಳ್ಳ ಲಾರದಷ್ಟು, ತನ್ನಿಂದ ನಿಯಂತ್ರಿಸಿಕೊಳ್ಳಲಾರದಷ್ಟು ಮಾನಸಿಕವಾಗಿ, ದೈಹಿಕವಾಗಿ ಯಾತನೆಯನ್ನು ಅನುಭವಿಸುತ್ತಿರಬಹುದು. ಅವನಲ್ಲಿ ಆಗುತ್ತಿರುವ ಹಾರ್ಮೋನಿನ ವಿಚಿತ್ರ ಬದಲಾವಣೆಗಳಿಂದ ಅವನು ಹಾಗೆ ವರ್ತಿಸುತ್ತಿರಬಹುದು. ನಿಮ್ಮ ಮಗುವಾಗಿ ಹುಟ್ಟಿದ ಮಾತ್ರಕ್ಕೆ ಅವನನ್ನು ನೀವು ಶಿಕ್ಷಿಸಬಾರದು, ಹೀಯಾಳಿಸಬಾರದು, ಹೊಡೆದು ಹಿಂಸಿಸಬಾರದು. ಅವನನ್ನು ಪ್ರೀತಿಸಬೇಕು, ಸಂತೈಸಬೇಕು. ಅವನಿಗೆ ಬದುಕಿನ ಬಗ್ಗೆ ಭರವಸೆ ಬರುವಂತೆ ವ್ಯವಹರಿಸಬೇಕು. ದೈಹಿಕ ಬದಲಾವಣೆಯಿಂದ ಅವನೊಳಗಿನ ಕರ್ತೃತ್ವ ಶಕ್ತಿಯಾಗಲೀ ಬುದ್ಧಿವಂತಿಕೆಯಾಗಲೀ ಕ್ರಿಯಾಶೀಲತೆಯಾಗಲೀ ಬದಲಾಗುವುದಿಲ್ಲ ಅಥವಾ ಕಡಿಮೆಯಾಗುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಮಗುವನ್ನು ಪಾಲಕರಷ್ಟು ಚೆನ್ನಾಗಿ ಬೇರೆಯವರು ಅರ್ಥಮಾಡಿಕೊಳ್ಳಲಾರರು. ಇಂಥ ಸಂದರ್ಭದಲ್ಲಿ ನೀವು ಅವನಿಗೆ ಎಂದಿನಂತೆ ಆಸರೆಯಾಗಿ ನಿಲ್ಲಬೇಕು. ಅವನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸಹಕರಿಸಬೇಕು. ಅವನು ಮುಂದೆ ಗಂಡಾಗಲಿ ಅಥವಾ ಹೆಣ್ಣಾಗಲಿ ಎಂದಿಗೂ ಅದು ನಿಮ್ಮ ಮಗು. ಅದು ಸತ್ಯ. ಅವನು ಮುಂದೆ ಒಬ್ಬ ಸಮಾಜಮುಖಿ ವ್ಯಕ್ತಿಯಾಗಿ ಬೆಳೆದು ದೇಶಕ್ಕೆ ಉಪಯೋಗವಾಗಬೇಕು. ಅಂಥ ವ್ಯಕ್ತಿಯನ್ನಾಗಿ ಬೆಳೆಸುವ ಜವಾಬ್ದಾರಿ ನಿಮ್ಮದು. ಅದಕ್ಕೆ ಸಹಕರಿಸುವುದು ಉಳಿದವರ ಕರ್ತವ್ಯವಾಗಿರುತ್ತದೆ. ಮನೋದೈಹಿಕವಾಗಿ ಬದಲಾಗುತ್ತಿರುವ ಅವನನ್ನು ಬೇರೆ ಥೆರಪಿಗಳಿಂದ ಬದಲಾಯಿಸಲು ಪ್ರಯತ್ನಿಸುವುದರಿಂದ ಅವನಿಗೂ ಕಷ್ಟ, ನಿಮಗೂ ಕಷ್ಟ, ಇಬ್ಬರಿಗೂ ನಷ್ಟ. ಉಳಿದವರ ಅನಿಸಿಕೆಗಳಿಗೆ ನೀವು ತಲೆಕೆಡಿಸಿಕೊಳ್ಳದೆ ನಿಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ಪ್ರಯತ್ನಿಸುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇನ್ನೂ ನಿಮಗೆ ಸಮಾಧಾನ ಆಗದಿದ್ದರೆ, ಮೂವರೂ ನನ್ನಲ್ಲಿ ಕೆಲವು ಸೆಷನ್ಗಳಿಗಾಗಿ ಬರಬಹುದು ಅಥವಾ ತಜ್ಞರನ್ನು ಭೇಟಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.