ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌: ಹಿತೈಷಿ, ಚರಿತಾ, ಅನಿಶ್ ಕೂಟ ದಾಖಲೆ

ಮೊದಲ ದಿನ ಮೂರು ದಾಖಲೆ l ಮಿಂಚಿದ ರಾಜ್ಯದ ಈಜುಪಟುಗಳು
Published 28 ಡಿಸೆಂಬರ್ 2023, 4:35 IST
Last Updated 28 ಡಿಸೆಂಬರ್ 2023, 4:35 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಹಿತೈಷಿ ವಿ., ಚರಿತಾ ಫಣೀಂದ್ರನಾಥ್ ಮತ್ತು ಅನಿಶ್ ಅನಿರುದ್ಧ ಕೋರೆ ಅವರು ಬುಧವಾರ ಬಸವನಗುಡಿ ಈಜುಕೊಳದಲ್ಲಿ ಆರಂಭವಾದ 34ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆಗಳನ್ನು ಸ್ಥಾಪಿಸಿದರು.

ಬಾಲಕಿಯರ ಒಂದನೇ ಗುಂಪಿನಲ್ಲಿ ಹಿತೈಷಿ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯನ್ನು 2ನಿ.52.69 ಸೆ.ಗಳಲ್ಲಿ ಮುಗಿಸಿ, ತೇಜಸ್ವಿನಿ (ಕರ್ನಾಟಕ) ಹೆಸರಿನಲ್ಲಿದ್ದ 2ನಿ.55.19 ಸೆ.ಗಳ ದಾಖಲೆ ಮುಳುಗಿಸಿದರು. ಎರಡನೇ ಗುಂಪಿನ 50 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚರಿತಾ 28.48 ಸೆ.ಗಳಲ್ಲಿ ಅಂತರ ಕ್ರಮಿಸಿ ನೀನಾ ವೆಂಕಟೇಶ್‌ (ಕರ್ನಾಟಕ) 2020ರಲ್ಲಿ ಸ್ಥಾಪಿಸಿದ್ದ 28.71 ಸೆ.ಗಳ ದಾಖಲೆ ಮುರಿದರು.

ಬಾಲಕರ ಎರಡನೇ ಗುಂಪಿನಲ್ಲಿ ಅನಿಶ್ ಅನಿರುದ್ಧ ಕೋರೆ 100 ಮೀ. ಬಟರ್‌ಫ್ಲೈ ಸ್ಪರ್ಧೆಯನ್ನು 1ನಿ.00.95 ಸೆ.ಗಳಲ್ಲಿ ಪೂರೈಸಿ 12 ವರ್ಷಗಳ ಹಿಂದೆ ಪ್ರಸಿದ್ಧ ಕೃಷ್ಣ (ಕರ್ನಾಟಕ) ಹೆಸರಿನಲ್ಲಿದ್ದ ಹಳೆಯ ದಾಖಲೆ (1ನಿ.01.30ಸೆ.) ಮುರಿದರು.

ಫಲಿತಾಂಶಗಳು: (ಗೆದ್ದ ಕರ್ನಾಟಕ ಸ್ಪರ್ಧಿಗಳು):

ಬಾಲಕರು (ಒಂದನೇ ಗುಂಪು): 50 ಮೀ. ಫ್ರೀಸ್ಟೈಲ್‌: ಚಿಂತನ್‌ ಎಸ್‌.ಶೆಟ್ಟಿ –1, ಅಲೈಸ್ಟರ್‌ ಸ್ಯಾಮುಯೆಲ್ ರೇಗೊ–2, ಕಾಲ: 24.54 ಸೆ.; 1,500 ಮೀ. ಫ್ರೀಸ್ಟೈಲ್‌: ಯಜತ್‌ ಅಯ್ಯಪ್ಪ ಕೆ.ಪಿ.–1, ರೇಣುಕಾಚಾರ್ಯ ಹೊದಮನಿ (ಕರ್ನಾಟಕ)–2, ಕಾಲ: 17ನಿ.19.24ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್‌: ಕುಶಲ್‌ ಕೆ –1, ಸೂರ್ಯ ಜೆ.ಟಿ. –2; ಕಾಲ: 1ನಿ.02.23 ಸೆ.; 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಸೂರ್ಯ ಜೋಯಪ್ಪ ಒ.ಆರ್‌. –1, ಶ್ರೇಯಸ್‌ ಮಂಜುನಾಥ್ –2, ಕಾಲ: 2ನಿ.36.51ಸೆ.; 100 ಮೀ. ಬಟರ್‌ಫ್ಲೈ: ಚಿಂತನ್‌ ಎಸ್‌.ಶೆಟ್ಟಿ –1, ಸ್ವರೂಪ್‌ ಧನುಚೆ –2, ಕಾಲ: 58.44 ಸೆ.; 200 ಮೀ. ಮೆಡ್ಲೆ: ಸೂರ್ಯ ಜೋಯಪ್ಪ –1, ಸಾಹಿಲ್‌ ದಲಾಲ್‌ –2, ಕಾಲ: 2ನಿ.20.11ಸೆ; 4x100 ಮೀ. ಮೆಡ್ಲೆ: ಕರ್ನಾಟಕ (ಕುಶಲ್‌, ಶ್ರೇಯಸ್‌, ಚಿಂತನ್‌, ಅಲೈಸ್ಟರ್‌)–1, ಕಾಲ: 4ನಿ.13.90 ಸೆ.; 4x200 ಮೀ. ಫ್ರೀಸ್ಟೈಲ್‌ ರಿಲೇ: ಕರ್ನಾಟಕ (ಧೋನೀಶ್, ಚಿಂತನ್‌ ಶೆಟ್ಟಿ, ರೇಣುಕಾಚಾರ್ಯ, ಅಲೈಸ್ಟರ್‌ ಸ್ಯಾಮುಯೆಲ್ ರೇಗೊ)–1, ಕಾಲ: 8ನಿ.26.29ಸೆ.; 

ಎರಡನೇ ಗುಂಪು:

50 ಮೀ. ಫ್ರೀಸ್ಟೈಲ್‌: ಸಾತ್ವಿಕ್‌ ನಾಯಕ್ ಸುಜೀರ್‌–1, ನಿಶಾಂತ್‌ ಜೆ. –3, ಕಾಲ: 26.71 ಸೆ.; 1,500 ಮೀ. ಫ್ರೀಸ್ಟೈಲ್‌: ಎಸ್‌.ಶರಣ್‌ –1, ಧ್ರುಪದ್ ರಾಮಕೃಷ್ಣ –2, ಕಾಲ:17.39.42 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್‌: ಸಮರ್ಥ ಗೌಡ ಬಿ.ಎಸ್‌. –1, ಅಭಿಮನ್ಯು ನಂಬಿಯಾರ್ –2, ಕಾಲ: 1ನಿ.05.01 ಸೆ.; 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಡೇನಿಯಲ್ ಪೌಲ್‌ ಜೆ. –1, ಯಶ್‌ ಎಚ್‌.ಪಾಲ್‌ –2 (ಕಾಲ: 2ನಿ.36.50ಸೆ.); 100 ಮೀ. ಬಟರ್‌ಫ್ಲೈ: ಅನಿಶ್‌ ಅನಿರುದ್ಧ ಕೋರೆ –1, ದಕ್ಷ್‌ ಮಟ್ಟಾ –2, ಕಾಲ: 1ನಿ.00.95ಸೆ. ಕೂಟ ದಾಖಲೆ, ಹಳೆಯದು: ಪ್ರಸಿದ್ಧಕೃಷ್ಣ ಪಿ.ಎ., 1ನಿ.01.30ಸೆ.; 200 ಮೀ. ಮೆಡ್ಲೆ: ದಕ್ಷ್‌ ಮಟ್ಟ–1, ಡೇನಿಯಲ್ ಪೌಲ್‌ –2, ಕಾಲ: 2ನಿ.23.28ಸೆ.; 4x100 ಮೀ. ಮೆಡ್ಲೆ ರಿಲೆ: ಕರ್ನಾಟಕ (ಅಭಿಮನ್ಯು, ದಕ್ಷ್‌, ಅನಿಶ್‌, ಸಾತ್ವಿಕ್‌)–1, ಕಾಲ: 4ನಿ.25.86 ಸೆ.; 4x200 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ಶರಣ್ ಎಸ್‌, ರಿಶಿತ್‌ ಗಗನ್, ಅಭಿಮನ್ಯು, ಸಾತ್ವಿಕ್‌ ನಾಯಕ್)–1, ಕಾಲ: 8ನಿ.44.41ಸೆ.; 

ಬಾಲಕಿಯರು:

ಗುಂಪು 1: 50 ಮೀ. ಫ್ರೀಸ್ಟೈಲ್‌: ಇಂಚರಾ ಫಣೀಂದ್ರನಾಥ್–1, ಸಾಕ್ಷಿ ಎಸ್‌.ದ್ಯಾಮಣ್ಣವರ –2, ಕಾಲ: 28.95ಸೆ.; 400 ಮೀ. ಫ್ರೀಸ್ಟೈಲ್‌: ಬಿ.ಎಸ್‌.ಜನ್ಯಾ–1, ಇ.ಎಸ್‌.ಸಮನ್ವಿ–2, ಕಾಲ: 4ನಿ.52.83 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್‌: ಸಿದ್ಧಿ ಜಿ.ಶಾ –1, ನೈಶಾ ಶೆಟ್ಟಿ–2 (ಕಾಲ:1ನಿ.10.22ಸೆ.); 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಹಿತೈಷಿ –1, ಸಮನ್ವಿ ಇ.ಎಸ್‌. –3, ಕಾಲ: 2ನಿ.52.69 ಸೆ., ನೂತನ ದಾಖಲೆ, ಹಳೆಯದು: ತೇಜಸ್ವಿನಿ, 2ನಿ.55.19ಸೆ.; 100 ಮೀ. ಬಟರ್‌ಫ್ಲೈ: ನೈಶಾ ಶೆಟ್ಟಿ –1, ಜನ್ಯಾ ಬಿ.ಎಸ್‌. –2, ಕಾಲ: 1ನಿ.06.70ಸೆ; 200 ಮೀ. ಮೆಡ್ಲೆ: ನೈಶಾ ಶೆಟ್ಟಿ–1, ಹಿತೈಷಿ ವಿ. –2, ಕಾಲ: 2ನಿ.34.85 ಸೆ.; 4x100 ಮೀ. ಮೆಡ್ಲೆ ರಿಲೆ: ಕರ್ನಾಟಕ (ಸಿದ್ಧಿ, ಸಮನ್ವಿ, ನೈಶಾ, ಜೆ.ಪೂಜಾ)–1, ಕಾಲ:4ನಿ.51.22 ಸೆ.; 4x200 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ಜೆ.ಪೂಜಾ, ಜನ್ಯಾ, ರಿಶಿಕಾ, ಸಮನ್ವಿ)–1, ಕಾಲ: 9ನಿ.30.27ಸೆ.; 

ಎರಡನೇ ಗುಂಪು:

50 ಮೀ. ಫ್ರೀಸ್ಟೈಲ್‌: ಚರಿತಾ ಫಣೀಂದ್ರನಾಥ್ –1, ತಿಸ್ಯಾ ಸೋನಾರ್ –2, ಕಾಲ: 28.48ಸೆ., ಕೂಟ ದಾಖಲೆ, ಹಳೆಯದು:28.71ಸೆ.; 400 ಮೀ. ಫ್ರೀಸ್ಟೈಲ್‌: ಧನ್ಯಾ ನಟರಾಜ ನಾಯಕ್–2 (ಕಾಲ: 5ನಿ.07.56ಸೆ.), ಹಿತಶ್ರೀ ಎನ್‌. –2; 100 ಮೀ. ಬ್ಯಾಕ್‌ಸ್ಟ್ರೋಕ್‌: ಎಂ.ಎನ್‌.ತಾನ್ಯಾ –1 (ಕಾಲ: 1ನಿ.10.46ಸೆ.); 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಗಗನಾ ಸಿ.ಎಂ. –2, ಹಿಯಾ ಮನ್‌ಚಂದಾ –3, ಕಾಲ: 3ನಿ.00.31ಸೆ.; ಅಂಜಲಿ ಹೊಸಕೆರೆ –1, ತನಿಶಾ ವಿನಯ್ –2, ಕಾಲ: 1ನಿ:08.85 ಸೆ; 4x100 ಮೀ. ಮೆಡ್ಲೆ ರಿಲೆ: ಕರ್ನಾಟಕ (ತಾನ್ಯಾ, ತಿಸ್ಯಾ, ಅಂಜುಲಿ, ಚರಿತಾ)–1, ಕಾಲ: 4ನಿ.47.20 ಸೆ.; 200 ಮೀ. ಮೆಡ್ಲೆ: ತಿಸ್ಯಾ ಸೋನಾರ್ –1, ತ್ರಿಶಾ ಸಿಂಧು ಎಸ್‌.–2, ಕಾಲ: 2ನಿ.40.44ಸೆ.; 4x200 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ಶಮನಿ ಗೌಡ, ಹಿಯಾ, ಸ್ಪರ್ಶಾ, ತ್ರಿಶಾ ಸಿಂಧು ಎಸ್‌)–1, ಕಾಲ: 9ನಿ.45.97 ಸೆ.;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT