ಭಾನುವಾರ, ಜೂನ್ 20, 2021
20 °C

ಮ್ಯಾಡ್ರಿಡ್ ಓಪನ್‌: ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್‌ಗೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡೆನಿಸ್ ಶಪೊವಲೊವ್ ಜೋಡಿ ಮ್ಯಾಡ್ರಿಡ್ ಓಪನ್ ಮಾಸ್ಟರ್ಸ್‌ 1000 ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಅವರು ಅಗ್ರ ಶ್ರೇಯಾಂಕದ ಆಟಗಾರರಾದ ಜುವಾನ್ ಸೆಬಾಸ್ಟಿಯನ್ ಕಾಬಲ್‌ ಮತ್ತು ರಾಬರ್ಟ್‌ ಫರಾ ಅವರನ್ನು 6-3, 6-4ರಲ್ಲಿ ಮಣಿಸಿದರು. 41 ವರ್ಷದ ಬೋಪಣ್ಣ ಅವರಿಗೆ ಎಟಿಪಿ ಟೂರ್ ಒಂದರಲ್ಲಿ ಇದು ಈ ವರ್ಷದ ಮೊದಲ ಕ್ವಾರ್ಟರ್ ಫೈನಲ್. 

ಬೋಪಣ್ಣ ಜೋಡಿ ಎಂಟರ ಘಟ್ಟದ ಹಣಾಹಣಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಟಿಮ್ ಪುಯೆಟ್ಜ್‌ ಅವರನ್ನು ಎದುರಿಸುವರು ಎಂದು ಭಾರತ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು