ಭಾನುವಾರ, ಜೂನ್ 13, 2021
25 °C

ಮ್ಯಾಡ್ರಿಡ್ ಓಪನ್ ಟೆನಿಸ್‌: ಎಂಟರಘಟ್ಟದಲ್ಲಿ ಎಡವಿದ ಬೋಪಣ್ಣ ಜೋಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಡೆನಿಸ್ ಶಪವಲೊವ್ ಜೋಡಿಯು ಮ್ಯಾಡ್ರಿಡ್ ಓಪನ್ ಟೆನಿಸ್‌ ಟೂರ್ನಿಯ ಎಂಟರಘಟ್ಟದ ಪಂದ್ಯದಲ್ಲಿ ವಿರೋಚಿತ ಸೋಲು ಅನುಭವಿಸಿತು. ಇಲ್ಲಿ ನಡೆದ ಪುರುಷರ ಡಬಲ್ಸ್ ಹಣಾಹಣಿಯಲ್ಲಿ ಜರ್ಮನಿಯ ಜೋಡಿ ಅಲೆಕ್ಸಾಂಡರ್‌ ಜ್ವೆರೆವ್‌– ಟಿಮ್‌ ಪ್ಯೂಟ್ಜ್‌ ಗೆಲುವು ಸಾಧಿಸಿದರು.

ಭಾರತ ಮತ್ತು ಕೆನಡಾದ ಆಟಗಾರರು 4–6, 6–3, 5–10ರಿಂದ ಜ್ವೆರೆವ್‌–ಟಿಮ್ ಎದುರು ಎಡವಿದರು.

ಬೋಪಣ್ಣ–ಡೆನಿಸ್‌ ಐದು ಏಸ್‌ಗಳನ್ನು ಸಿಡಿಸಿದರೆ, ಎದುರಾಳಿಗಳು ಸಿಡಿಸಿದ್ದು ಕೇವಲ ಮೂರು. ಆದರೆ ಹೆಚ್ಚು ಲೋಪಗಳನ್ನು ಎಸಗಿದ ಕಾರಣ ಬೋಪಣ್ಣ–ಡೆನಿಸ್‌ಗೆ ಸೋಲಾಯಿತು.

ಟೂರ್ನಿಯ ಆರಂಭದಲ್ಲಿ ಶ್ರೇಯಾಂಕರಹಿತ ಆಟಗಾರರಾದ ಬೋಪಣ್ಣ–ಶಪವಲೊವ್ ಅಗ್ರಶ್ರೇಯಾಂಕದ ಜುವಾನ್ ಸೆಬಾಸ್ಟಿಯನ್‌–ರಾಬರ್ಟ್‌ ಫರಾಹ್ ಎದುರು ಜಯಭೇರಿ ಬಾರಿಸಿದ್ದರು.

ಬೋಪಣ್ಣ ಹಾಗೂ ಕೆನಡಾದ 22 ವರ್ಷದ ಆಟಗಾರ ಶಪವಲೊವ್‌, 2019ರಿಂದ ಡಬಲ್ಸ್‌ನಲ್ಲಿ ಜೊತೆಯಾಗಿ ಆಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು