ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ಟಿ20 ವಿಶ್ವಕಪ್: 16 ಸ್ಥಾನಗಳಿಗೆ 86 ತಂಡಗಳ ಪೈಪೋಟಿ

Last Updated 14 ಡಿಸೆಂಬರ್ 2020, 15:39 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ 2022ರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ.

13 ತಿಂಗಳುಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 223 ಪಂದ್ಯಗಳಲ್ಲಿ ಒಟ್ಟು 86 ತಂಡಗಳು ಆಡಲಿವೆ. ಅದರಲ್ಲಿ 15 ತಂಡಗಳು ಮಾತ್ರ ಅರ್ಹತೆ ಪಡೆಯಲಿವೆ.

ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಹನ್ನೊಂದು ಪ್ರಾದೇಶಿಕ ಸುತ್ತುಗಳ ಟೂರ್ನಿಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಹಂಗರಿ, ರೊಮೇನಿಯಾ ಮತ್ತು ಸರ್ಬಿಯಾ ರಾಷ್ಟ್ರಗಳ ತಂಡಗಳು ಆಡಲಿವೆ. ಪುರುಷರ ವಿಭಾಗದ ಟಿ20 ಅರ್ಹತಾ ಟೂರ್ನಿಗೆ ಫಿನ್ಲೆಂಡ್ ಇದೇ ಮೊದಲ ಸಲ ಆತಿಥ್ಯ ವಹಿಸುವದು.

ಇದೇಮೊದಲ ಬಾರಿಗೆ ಜಪಾನ್ ದೇಶವೂ ಐಸಿಸಿ ಅರ್ಹತಾ ಟೂರ್ನಿಗೆ ಅತಿಧ್ಯ ವಹಿಸಲಿದೆ. ಇದಕ್ಕೂ ಎರಡು ವಾರಗಳ ಮುನ್ನ 19 ವರ್ಷಗಳೊಳಗಿನವರ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯೂ ಇಲ್ಲಿ ನಡೆಯಲಿದೆ.

ಆಫ್ರಿಕಾ ಮತ್ತು ಯುರೋಪ್‌ ವಲಯಗಳಲ್ಲಿ ಹೆಚ್ಚು ತಂಡಗಳಿರುವುದರಿಂದ ಅಲ್ಲಿ ಉಪವಲಯಗಳನ್ನಾಗಿಯೂ ವಿಂಗಡಿಸಲಾಗಿದೆ. ಐಸಿಸಿಯಲ್ಲಿ 67 ನೋಂದಾಯಿತ ಸಂಸ್ಥೆಗಳು ಪಾಲ್ಗೊಳ್ಳಲಿವೆ.

2022ರ ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಲಿದೆ. ಆಸ್ಟ್ರೇಲಿಯಾದಲ್ಲಿ 2020ರ ಅಕ್ಟೋಬರ್‌ನಲ್ಲಿ ಆಯೋಜನೆಯಾಗಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಮುಂದೂಡಲಾಗಿತ್ತು.

ಮುಂದಿನ ವರ್ಷ ಭಾರತದಲ್ಲಿ ವಿಶ್ವಕಪ್ ನಡೆಯುವುದು. ಅದರಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಗಾನಿಸ್ಥಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನಮಿಬಿಯಾ, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಒಮನ್, ಪಾಕಿಸ್ತಾನ, ಪಪುವಾ ನ್ಯೂಗಿನಿ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT