ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

33ನೇ ಪಂದ್ಯದಲ್ಲೇ 200 ವಿಕೆಟ್‌: 82 ವರ್ಷಗಳ ಹಿಂದಿನ ದಾಖಲೆ ಮುರಿದ ಯಾಸಿರ್

Last Updated 7 ಡಿಸೆಂಬರ್ 2018, 1:06 IST
ಅಕ್ಷರ ಗಾತ್ರ

ಅಬುದಾಬಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ ದಾಖಲೆಯನ್ನು ಪಾಕಿಸ್ತಾನ ತಂಡದ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಗುರುವಾರ ಮಾಡಿದರು. ಇದರೊಂದಿಗೆ 82 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಕ್ಲ್ಯಾರಿ ಗ್ರಿಮೆಟ್ ಮಾಡಿದ್ದ ದಾಖಲೆಯನ್ನು ಮೀರಿ ನಿಂತರು.

ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಅವರು ಬ್ಯಾಟ್ಸ್‌ಮನ್ ವಿಲ್ ಸೊಮರ್‌ವಿಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಇದರೊಂದಿಗೆ 200 ವಿಕೆಟ್‌ ಪಡೆದ ಸಾಧನೆ ಮಾಡಿದರು. 32 ವರ್ಷದ ಯಾಸಿರ್ ಅವರಿಗೆ ಇದು 33ನೇ ಟೆಸ್ಟ್‌. ಇದರಲ್ಲಿ ಅವರು ಐದು ವಿಕೆಟ್ ಗಳಿಸಿದ್ದಾರೆ.

1936ರಲ್ಲಿ ಕ್ಲ್ಯಾರಿ ಗ್ರಿಮೆಟ್ ಅವರು 36 ಟೆಸ್ಟ್‌ಗಳನ್ನು ಆಡಿ ಈ ಸಾಧನೆ ಮಾಡಿದ್ದರು. ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು 37 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ವಕಾರ್ ಯೂನಿಸ್ ಅವರು 38 ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಗಳಿಸಿದ್ದರು.

ಯಾಸಿರ್ ಅವರು 2014ರಲ್ಲಿ ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು. 2011ರಲ್ಲಿ ಜಿಂಬಾಬ್ವೆ ಎದುರು ಹರಾರೆಯಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ 19 ಪಂದ್ಯಗಳನ್ನು ಆಡಿದ್ದಾರೆ. 19 ವಿಕೆಟ್ ಪಡೆದಿದ್ದಾರೆ. ಎರಡು ಟ್ವೆಂಟಿ–20 ಪಂದ್ಯಗಳನ್ನೂ ಅವರು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT