ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ನಥಾಲಿ ಶಿವರ್ ಬ್ರಂಟ್ ಅವರು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎರಡು ದಾಖಲೆ ಬರೆದರು.

ಈ ಋತುವಿನ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನಥಾಲಿ ಶಿವರ್ ಬ್ರಂಟ್ 500 ರನ್ಗಳ ಪೂರೈಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಹಾಗೇ 29 ವಿಕೆಟ್ಗಳನ್ನು ಪಡೆಯುವ ಮೂಲಕ ಉತ್ತಮ ಆಲ್ರೌಂಡರ್ ಎನಿಸಿದರು.

2023ರ ಟೂರ್ನಿಯಲ್ಲಿ 10 ಪಂದ್ಯಗಳಿಂದ 332 ರನ್ ಕಲೆ ಹಾಕಿದ್ದರು. 2024ರಲ್ಲಿ 9 ಪಂದ್ಯಗಳಿಂದ 172 ರನ್ಗಳಿದ್ದರು. ಈ ಸಲ 500 ರನ್ ಪೂರೈಸಿ ಹೊಸ ದಾಖಲೆ ಬರೆದರು.

ಶಿವರ್ ಬ್ರಂಟ್ ಸಾವಿರ ರನ್

ನಥಾಲಿ ಶಿವರ್ ಬ್ರಂಟ್ ಅವರು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಒಂದು ಸಾವಿರ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಶನಿವಾರ ಅವರು ಈ ಮೈಲಿಗಲ್ಲು ದಾಟಿದರು. ಇಂಗ್ಲೆಂಡ್ ಆಲ್ರೌಂಡರ್ ಆಗಿರುವ ಬ್ರಂಟ್ ಅವರು ಡಬ್ಲ್ಯುಪಿಎಲ್ನಲ್ಲಿ ಒಟ್ಟು 29 ಪಂದ್ಯಗಳಿಂದ 1027 ರನ್ ಗಳಿಸಿದ್ದಾರೆ.

ಆರ್ಸಿಬಿಯ ಎಲಿಸ್ ಪೆರಿ (972), ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಗ್ ಲ್ಯಾನಿಂಗ್ (939), ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಫಾಲಿ ವರ್ಮಾ (861) ಮತ್ತು ಮುಂಬೈನ ಹರ್ಮನ್ಪ್ರೀತ್ (851) ಅವರು ನಂತರದ ಸ್ಥಾನಗಳಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.