ಗುರುವಾರ , ಡಿಸೆಂಬರ್ 3, 2020
23 °C

ಭಾರತದಲ್ಲಿ ಅಫ್ಗಾನ್‌–ವಿಂಡೀಸ್‌ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಫ್ಗಾನಿಸ್ತಾನ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಕ್ರಿಕೆಟ್‌ ಸರಣಿಯು ಈ ವರ್ಷದ ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ.

‘ಫ್ಯೂಚರ್ ಟೂರ್ಸ್‌ ಪ್ರೋಗ್ರಾಮ್‌ (ಎಫ್‌ಟಿಪಿ) ಅನ್ವಯ ಅಫ್ಗಾನಿಸ್ತಾನ ನವೆಂಬರ್‌ 5 ರಿಂದ ಡಿಸೆಂಬರ್‌ 1ರ ಅವಧಿಯಲ್ಲಿ ವಿಂಡೀಸ್‌ ಎದುರು ಏಕದಿನ, ಟ್ವೆಂಟಿ (ತಲಾ ಮೂರು ಪಂದ್ಯ) ಹಾಗೂ ಟೆಸ್ಟ್‌ (ಒಂದು ಪಂದ್ಯ) ಸರಣಿಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳೂ ಭಾರತದಲ್ಲೇ ನಡೆಯಲಿವೆ. ಕ್ರೀಡಾಂಗಣಗಳನ್ನು ಶೀಘ್ರವೇ ಅಂತಿಮಗೊಳಿಸುತ್ತೇವೆ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

‘ವಿಂಡೀಸ್‌ ಸರಣಿಗೂ ಮುನ್ನ ಅಫ್ಗಾನ್‌ ತಂಡವು ಬಾಂಗ್ಲಾದೇಶ ಎದುರು ಏಕೈಕ ಟೆಸ್ಟ್‌ (ಸೆಪ್ಟೆಂಬರ್‌ನಲ್ಲಿ) ಆಡಲಿದೆ. ನಂತರ ತ್ರಿಕೋನ ಟ್ವೆಂಟಿ–20 ಸರಣಿ ನಡೆಯಲಿದೆ. ಇದರಲ್ಲಿ ಬಾಂಗ್ಲಾ ಮತ್ತು ಜಿಂಬಾಬ್ವೆ ಭಾಗವಹಿಸಲಿವೆ’ ಎಂದೂ ವಿವರಿಸಲಾಗಿದೆ.

ಅಫ್ಗಾನ್‌ ಮತ್ತು ವಿಂಡೀಸ್‌ ಇದುವರೆಗೂ 10 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಕೆರಿಬಿಯನ್‌ ತಂಡವು ಐದರಲ್ಲಿ ಗೆದ್ದಿದೆ.

ಅಫ್ಗಾನಿಸ್ತಾನದಲ್ಲಿ ಸುಸಜ್ಜಿತ ಮೈದಾನ ಮತ್ತು ಮೂಲ ಸೌಕರ್ಯಗಳಿಲ್ಲದ ಕಾರಣ ಆ ತಂಡವು ಮೊದಲಿನಿಂದಲೂ ತನ್ನ ಪಾಲಿನ ಸರಣಿಗಳನ್ನು ಭಾರತದಲ್ಲಿ ಆಡುತ್ತಿದೆ.

ವೇಳಾಪಟ್ಟಿ
* ನವೆಂಬರ್‌ 5 | ಮೊದಲ ಟ್ವೆಂಟಿ–20
* ನವೆಂಬರ್‌ 7 | ಎರಡನೇ ಟ್ವೆಂಟಿ–20
* ನವೆಂಬರ್‌ 9 | ಮೂರನೇ ಟ್ವೆಂಟಿ–20
* ನವೆಂಬರ್‌ 13 | ಮೊದಲ ಏಕದಿನ
* ನವೆಂಬರ್‌ 16 | ಎರಡನೇ ಏಕದಿನ
* ನವೆಂಬರ್‌ 18 | ಮೂರನೇ ಏಕದಿನ
* ನವೆಂಬರ್‌ 27–ಡಿಸೆಂಬರ್‌ 1 | ಏಕೈಕ ಟೆಸ್ಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು