ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಗೆಲುವು

ಬುಧವಾರ, ಜೂಲೈ 17, 2019
29 °C

ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಗೆಲುವು

Published:
Updated:
Prajavani

ಕಾರ್ಡಿಫ್‌: ಸತತ ಸೋಲಿನಿಂದ ಕಂಗೆಟ್ಟಿದ್ದ ದ.ಆಫ್ರಿಕಾ ತಂಡ ಶನಿವಾರ ಇಲ್ಲಿನ ವೇಲ್ಸ್ ಕ್ರೀಡಾಂಗಣದಲ್ಲಿ ಮೊದಲ ಜಯ ಕಂಡಿತು.ಡಕ್ವರ್ಥ್‌ ಲೂಯಿಸ್‌ ನಿಯಮದಡಿ ಅಫ್ಗಾನಿಸ್ತಾನ ತಂಡವನ್ನು 9 ವಿಕೆಟ್‌ಗಳಿಂದ ಅದು ಮಣಿಸಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಗಾನಿಸ್ತಾನ ತಂಡ ದಕ್ಷಿಣ ಆಫ್ರಿಕಾದ ತಾಹಿರ್ ದಾಳಿಗೆ ನಲುಗಿ 125 ರನ್‌ಗಳಿಗೆ ಪತನ ಕಂಡಿತು. ಮಳೆಯಿಂದಾಗಿ 48 ಓವರ್‌ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು. ಅಫ್ಗಾನಿಸ್ತಾನ ಪರ ರಶೀದ್‌ಖಾನ್‌ (35) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ನೂರ್ ಅಲಿ ಜದ್ರಾನ್(32) ಹಾಗೂ ಹಜ್ರತ್‌ ಉಲ್ಲಾ ಜಜಾಯಿ (22) ಅಲ್ಪ ಕೊಡುಗೆ ನೀಡಿದರು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್‌ ಡಿಕಾಕ್‌ ಅರ್ಧಶತಕ (68) ಹಾಗೂ ಹಾಶೀಮ್‌ ಆಮ್ಲಾ (ಔಟಾಗದೆ 41) ಹಾಗೂ ಆ್ಯಂಡಿಲೆ ಪಿಶುವಾಯೊ (ಔಟಾಗದೆ 17) ಉತ್ತಮ ಬ್ಯಾಟಿಂಗ್‌ ನೆರವಿನಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರ್: ಅಫ್ಗಾನಿಸ್ತಾನ: 34.1 ಓವರ್‌ಗಳಲ್ಲಿ 125;( ಜಜಾಯ್ 22, ಜದ್ರಾನ್ 32, ರಶೀದ್ 35; ಕ್ರಿಸ್ ಮಾರಿಸ್ 13ಕ್ಕೆ3, ಇಮ್ರಾನ್ ತಾಹಿರ್ 29ಕ್ಕೆ4). ದಕ್ಷಿಣ ಆಫ್ರಿಕಾ: 28.4 ಓವರ್‌ಗಳಲ್ಲಿ 1 ವಿಕೆಟ್‌ಗೆ 131;( ಡಿ ಕಾಕ್‌ 68, ಆಮ್ಲಾ ಔಟಾಗದೆ 41; ನೈಬ್‌ 29ಕ್ಕೆ 1)

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !