ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Imran Tahir

ADVERTISEMENT

ಚೆನ್ನೈ ಫ್ರಾಂಚೈಸ್‌ನಿಂದ ಅಪಾರ ಗೌರವ ದೊರೆತಿದೆ: ಇಮ್ರಾನ್ ತಾಹಿರ್

ಕಳೆದ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿ ಪರ್ಪಲ್‌ ಕ್ಯಾಪ್‌ ಪಡೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಇಮ್ರಾನ್‌ ತಾಹಿರ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 2019ರ ಟೂರ್ನಿಯಲ್ಲಿ 17 ಪಂದ್ಯಗಳಲ್ಲಿ ಆಡಿದ್ದ ತಾಹಿರ್, 6.69 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 26 ವಿಕೆಟ್‌ಗಳನ್ನು ಪಡೆದಿದ್ದರು. ಆದರೂ ಈ ಬಾರಿ ಅವರು ಒಂದೂ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಪಂದ್ಯವೊಂದರಲ್ಲಿ ಒಂದು ತಂಡದ ಪರವಾಗಿ ನಾಲ್ವರು ವಿದೇಶಿ ಆಟಗಾರರು ಮಾತ್ರವೇ ಆಡಲು ಅವಕಾಶವಿದೆ. ಬ್ಯಾಟ್ಸ್‌ಮನ್‌ಗಳಾಗಿ ಶೇನ್‌ ವಾಟ್ಸನ್‌, ಫಾಫ್‌ ಡು ಪ್ಲೆಸಿ ಮತ್ತು ಆಲ್‌ರೌಂಡರ್‌ಗಳಾಗಿ ಸ್ಯಾಮ್‌ ಕರನ್‌, ಡ್ವೇನ್‌ ಬ್ರಾವೊ ಅವರನ್ನು ಕಣಕ್ಕಿಳಿಸಲು ಚೆನ್ನೈ ತಂಡ ಒಲವು ತೋರಿರುವುದು ಇದಕ್ಕೆ ಕಾರಣ. ಆದಾಗ್ಯೂ ತಾಹಿರ್ ತಂಡದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆರ್‌.ಅಶ್ವಿನ್‌ ಅವರೊಂದಿಗೆ ಯುಟ್ಯೂಬ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ಚೆನ್ನೈ ಅತ್ಯುತ್ತಮ ತಂಡ. ನಾನು ಪ್ರಪಂಚದಾದ್ಯಂತ ಆಡಿದ್ದೇನೆ. ಆದರೆ, ಚೆನ್ನೈ ಫ್ರಾಂಚೈಸ್‌ನಿಂದ ದೊರೆತಷ್ಟು ಗೌರವ ಬೇರೆಲ್ಲೂ ಸಿಕ್ಕಿಲ್ಲ. ಇಲ್ಲಿನ ಅಭಿಮಾನಿಗಳೂ ನಂಬಲಾಗದಷ್ಟು ಪ್ರೀತಿ ತೋರಿದ್ದಾರೆ. ಚೆನ್ನೈ ತಂಡದಲ್ಲಿ ಆಡುವಾಗ ವಿಭಿನ್ನ ವಾತವರಣ ಇರುತ್ತದೆ. ತಂಡದ ಯಾರೊಬ್ಬರೂ ನಿಮ್ಮ ಪ್ರದರ್ಶನದ ಬಗ್ಗೆ ಮಾತನಾಡುವುದಿಲ್ಲ. ಪರಸ್ಪರ ಬೆಂಬಲ ನೀಡುತ್ತಾರೆ’ ಎಂದು ಹೇಳಿದ್ದಾರೆ.
Last Updated 22 ಅಕ್ಟೋಬರ್ 2020, 16:18 IST
ಚೆನ್ನೈ ಫ್ರಾಂಚೈಸ್‌ನಿಂದ ಅಪಾರ ಗೌರವ ದೊರೆತಿದೆ: ಇಮ್ರಾನ್ ತಾಹಿರ್

ಸಿಎಸ್‌ಕೆ ಕ್ಯಾಪ್‌ ಧರಿಸಿದ್ದು ಸ್ಮರಣೀಯ ಘಳಿಗೆ: ತಾಹಿರ್‌

‘ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ ಪ್ರತಿ ಬಾರಿ ಪಂದ್ಯ ಆಡಲು ಇಳಿಯುವಾಗ ರೋಮಾಂಚನ ಆಗುತಿತ್ತು. ಅಲ್ಲಿ ಕುಟುಂಬದ ವಾತಾವರಣ ಕಾಣುತ್ತಿದ್ದೆ’ ಎಂದು ದಕ್ಷಿಣ ಆಫ್ರಿಕಾದ ಹಿರಿಯ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಹೇಳಿದ್ದಾರೆ.
Last Updated 30 ಏಪ್ರಿಲ್ 2020, 20:15 IST
ಸಿಎಸ್‌ಕೆ ಕ್ಯಾಪ್‌ ಧರಿಸಿದ್ದು ಸ್ಮರಣೀಯ ಘಳಿಗೆ: ತಾಹಿರ್‌

ತಾಹಿರ್‌ಗೆ ಭಾವನಾತ್ಮಕ ಕ್ಷಣ

ದಕ್ಷಿಣ ಆಫ್ರಿಕಾ ತಂಡದ ‘ಹಿರಿಯಣ್ಣ’ ಇಮ್ರಾನ್‌ ತಾಹಿರ್‌ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಭಾವನಾತ್ಮಕ ವಿದಾಯಕ್ಕೆ ಸಜ್ಜಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ತಂಡದ ಭವಿಷ್ಯದ ಬಗ್ಗೆ ಈ ಅನುಭವಿ ಲೆಗ್‌ಬ್ರೇಕ್‌ ಬೌಲರ್‌ ಆಶಾವಾದಿಯಾಗಿದ್ದಾರೆ.‌
Last Updated 5 ಜುಲೈ 2019, 20:01 IST
ತಾಹಿರ್‌ಗೆ ಭಾವನಾತ್ಮಕ ಕ್ಷಣ

ಬಾಬರ್‌–ಹ್ಯಾರಿಸ್‌ ಉತ್ತಮ ಬ್ಯಾಟಿಂಗ್‌: ದ.ಆಫ್ರಿಕಾ ಗೆಲುವಿಗೆ 309 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌
Last Updated 23 ಜೂನ್ 2019, 13:44 IST
ಬಾಬರ್‌–ಹ್ಯಾರಿಸ್‌ ಉತ್ತಮ ಬ್ಯಾಟಿಂಗ್‌: ದ.ಆಫ್ರಿಕಾ ಗೆಲುವಿಗೆ 309 ರನ್‌ ಗುರಿ

ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಗೆಲುವು

ಸತತ ಸೋಲಿನಿಂದ ಕಂಗೆಟ್ಟಿದ್ದ ದ.ಆಫ್ರಿಕಾ ತಂಡ ಶನಿವಾರ ಇಲ್ಲಿನ ವೇಲ್ಸ್ ಕ್ರೀಡಾಂಗಣದಲ್ಲಿ ಮೊದಲ ಜಯ ಕಂಡಿತು.ಡಕ್ವರ್ಥ್‌ ಲೂಯಿಸ್‌ ನಿಯಮದಡಿ ಅಫ್ಗಾನಿಸ್ತಾನ ತಂಡವನ್ನು 9 ವಿಕೆಟ್‌ಗಳಿಂದ ಅದು ಮಣಿಸಿತು.
Last Updated 15 ಜೂನ್ 2019, 20:03 IST
ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಗೆಲುವು

ಮೊದಲ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ತೆಗೆದ ಇಮ್ರಾನ್ ತಾಹೀರ್ ವಯಸ್ಸು 40!

ವಿಶ್ವಕಪ್‌ನ ಮೊದಲ ಓವರ್‌ನಲ್ಲಿ ಬೌಲಿಂಗ್ ಮಾಡಿ ಎರಡನೇ ಎಸೆತದಲ್ಲಿ ವಿಕೆಟ್ ಗಳಿಸಿದಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆ ಇಮ್ರಾನ್ ತಾಹೀರ್ ಪಾಲಾಗಿದೆ.
Last Updated 13 ಜೂನ್ 2019, 14:48 IST
ಮೊದಲ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ತೆಗೆದ ಇಮ್ರಾನ್ ತಾಹೀರ್ ವಯಸ್ಸು 40!

ದಾಖಲೆ ಬರೆದ ಇಮ್ರಾನ್ ತಾಹೀರ್

ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಇತಿಹಾಸದಲ್ಲಿಯೇ ಅಪರೂಪದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ ಬರೆದರು.
Last Updated 13 ಜೂನ್ 2019, 14:48 IST
ದಾಖಲೆ ಬರೆದ ಇಮ್ರಾನ್ ತಾಹೀರ್
ADVERTISEMENT
ADVERTISEMENT
ADVERTISEMENT
ADVERTISEMENT