ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಮಿಫೈನಲ್‌ಗೆ ಅಫ್ಗನ್‌ ಲಗ್ಗೆ | ಬ್ರಯಾನ್‌ ಲಾರಾ ಮಾತುಗಳಿಂದ ಸ್ಫೂರ್ತಿ: ರಶೀದ್

Published 25 ಜೂನ್ 2024, 13:03 IST
Last Updated 25 ಜೂನ್ 2024, 13:03 IST
ಅಕ್ಷರ ಗಾತ್ರ

ರ್ನಾಸ್‌ ವೇಲ್ (ಸೇಂಟ್‌ ವಿನ್ಸೆಂಟ್‌),: ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅಫ್ತಾನಿಸ್ತಾನ ತಂಡ ಮೊದಲ ಬಾರಿ ಸೆಮಿಫೈನಲ್‌ ತಲುಪುವಲ್ಲಿ ಕ್ರಿಕೆಟ್ ದಂತಕಥೆ ಬ್ರಯಾನ್‌ ಲಾರಾ ಅವರೇ ಸ್ಫೂರ್ತಿ ಎಂದು ಆ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರೆ.

ಒಂದನೇ ಗುಂಪಿನ ರೋಚಕ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡದ ಮೇಲೆ ಎಂಟು ರನ್‌ಗಳ ಜಯ ಪಡೆದ ಅಫ್ಗಾನಿಸ್ತಾನ ನಾಲ್ಕರ ಘಟ್ಟ ತಲುಪಿತ್ತು. ರಶೀದ್ ಖಾನ್ ಬಳಗದ ಗೆಲುವಿನಿಂದಾಗಿ ಆಸ್ಟ್ರೇಲಿಯಾ ಹೊರಬಿದ್ದಿತ್ತು.

‘ನಾವು ಒಬ್ಬರ ಮಾತನ್ನು ನಿಜಗೊಳಿಸಿದ್ದೇವೆ. ಅಫ್ಗಾನಿಸ್ತಾನ ಸೆಮಿಫೈನಲ್ ತಲುಪಲಿದೆ ಎಂದು ಲಾರಾ ಅವರು ಹಿಂದೆಯೇ ಹೇಳಿದ್ದರು’ ಎಂದು ರಶೀದ್ ನೆನಪಿಸಿದರು.

‘ನಾವು ಇಲ್ಲಿಗೆ ಬಂದಾಗ ಸ್ವಾಗತ ಕೂಟದಲ್ಲಿ ಲಾರಾ ಅವರನ್ನು ಭೇಟಿ ಮಾಡಿದ್ದೆವು. ಆಗ ಅವರು ಇಂಥ ಹೇಳಿಕೆ ನೀಡಿದ್ದರು. ಅಂಥ ದೊಡ್ಡ ಆಟಗಾರ ಹೀಗೆ ಹೇಳಿದಾಗ ಅದು ನಮಗೆ ಸಾಕಷ್ಟು ಚೈತನ್ಯ ನೀಡುತ್ತದೆ’ ಎಂದು ಅಫ್ಗನ್ ನಾಯಕ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT