ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಅಫ್ಗನ್ ಸ್ಪಿನ್ನರ್‌ ಮುಜೀಬ್ ಹೊರಕ್ಕೆ

Published 15 ಜೂನ್ 2024, 16:33 IST
Last Updated 15 ಜೂನ್ 2024, 16:33 IST
ಅಕ್ಷರ ಗಾತ್ರ

ಗ್ರೋಸ್ ಐಲೆಟ್: ಬೆರಳಿನ ಗಾಯದಿಂದಾಗಿ ಆಫ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದು, ಅವರ ಬದಲಿಗೆ ಬ್ಯಾಟರ್‌ ಹಜರತುಲ್ಲಾ ಝಜೈ ಅಫ್ಗಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಲ ತೋರುಬೆರಳಿಗೆ ಗಾಯ ಮಾಡಿಕೊಂಡಿರುವ 23 ವರ್ಷದ ಮುಜೀಬ್, ಯುಗಾಂಡ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮಾತ್ರ ಆಡಿದ್ದಾರೆ.

‘ಟಿ20 ವಿಶ್ವಕಪ್ 2024ರ ತಾಂತ್ರಿಕ ಕಮಿಟಿ ಅಫ್ಗಾನಿಸ್ತಾನ ತಂಡದಲ್ಲಿ ಮುಜೀಬ್  ಬದಲಿಗೆ ಹಜರತುಲ್ಲಾ ಝಜೈ ಅವರನ್ನು ಅನುಮೋದಿಸಿದೆ’ ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಸೂಪರ್‌ 8 ಹಂತಕ್ಕೆ ಅರ್ಹತೆ ಪಡೆದಿರುವ ಅಫ್ಗಾನಿಸ್ತಾನ ತಂಡ, ತನ್ನ ಗುಂಪಿನಲ್ಲಿ ಅತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದೆ. 

43 ಟಿ20 ಪಂದ್ಯಗಳನ್ನು ಆಡಿರುವ ಝಜೈ, ಮುಜೀಬ್‌ಗೆ ಬದಲಿ ಆಟಗಾರನಲ್ಲ. ಆದಾಗ್ಯೂ, ಅಫ್ಗಾನ್ ತಂಡದಲ್ಲಿ 19 ವರ್ಷದ ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಇದ್ದಾರೆ. ಅವರು ಮುಜೀಬ್ ಅವರ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT