ಗುರುವಾರ , ಅಕ್ಟೋಬರ್ 28, 2021
18 °C

ಸರಣಿಯಿಂದ ಹಿಂದೆ ಸರಿದ ಇಂಗ್ಲೆಂಡ್: ಪಾಕ್ ಸಚಿವ ವಿಷಾದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಡುವುದರಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಹಿಂದೆ ಸರಿದಿರುವುದು ದುರದೃಷ್ಟಕರ. ಪಾಕ್ ನೆಲದಲ್ಲಿ ಅಮೆರಿಕದ ಸೇನೆಗಳಿಗೆ  ನೆಲೆ ಸ್ಥಾಪಿಸುವ ಮನವಿ ನಿರಾಕರಿಸಿದ್ದರ ಪ್ರತಿಫಲ ಇದಾಗಿದೆ ಎಂದು ಅಲ್ಲಿಯ ಮಾಹಿತಿ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. 

ಹೋದ ಶುಕ್ರವಾರ ನ್ಯೂಜಿಲೆಂಡ್ ತಂಡವು ಪಾಕಿಸ್ತಾನದಲ್ಲಿ ಸರಣಿ ಆರಂಭವಾಗುವ ಮುನ್ನವೇ ಜೀವಬೆದರಿಕೆ ಕಾರಣವೊಡ್ಡಿ ಹಿಂದೆ ಸರಿದಿತ್ತು.  ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿದ್ದ ಸರಣಿಯಿಂದ ಇಂಗ್ಲೆಂಡ್ ಕೂಡ ಹಿಂದೆ ಸರಿದಿರುವುದನ್ನು ಸೋಮವಾರ ಪ್ರಕಟಿಸಿದೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಫವಾದ್, ‘ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಸಭೆ ನಡೆಸಲಾಯಿತು. ಈ ಹಿಂದೆ ಅಮೆರಿಕವು ತನ್ನ ಸೇನಾ ನೆಲೆಗಳನ್ನು ಪಾಕ್‌ನಲ್ಲಿ ಸ್ಥಾಪಿಸಲು ಕೋರಿತ್ತು. ಆದರೆ ಅದನ್ನು ನಮ್ಮ ಸರ್ಕಾರ ನಿರಾಕರಿಸಿತ್ತು. ಇದೀಗ ಅದರ ಬೆಲೆ ತೆರಬೇಕಾಗಿದೆ’ ಎಂದರು. 

ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಿರ್ಧಾರದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಪಾರ ಪ್ರಮಾಣದ ಆದಾಯ ನಷ್ಟವಾಗಿದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಅಲ್ಲಿಯೆ ಹಿರಿಯ ಕ್ರಿಕೆಟಿಗರೂ ಹೇಳಿದ್ದಾರೆ.

‘ಪಾಕಿಸ್ತಾನದ ಕ್ರಿಕೆಟ್‌ ಅನ್ನು ನ್ಯೂಜಿಲೆಂಡ್ ಕೊಂದಿತು’ ಎಂದು ಈಚೆಗೆ ಶೋಯಬ್ ಅಖ್ತರ್ ಟ್ವೀಟ್ ಮಾಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು