ಸೋಮವಾರ, ಜೂನ್ 1, 2020
27 °C

ನಾಯಕತ್ವಕ್ಕೆ ನಾನೂ ಆಕಾಂಕ್ಷಿ: ಮರ್ಕರಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೋಹಾನ್ಸ್‌ಬರ್ಗ್‌: ‘ದಕ್ಷಿಣ ಆಫ್ರಿಕಾ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ತಾನೂ ಆಕಾಂಕ್ಷಿ’ ಎಂದು ತಂಡದ ಬ್ಯಾಟ್ಸಮನ್‌ ಏಡನ್‌ ಮರ್ಕರಮ್‌ ಹೇಳಿದ್ದಾರೆ. ಸಾರಥ್ಯ ಸಿಗದಿದ್ದರೆ ನಿರಾಶೆಯಂತೂ ಆಗುವುದಿಲ್ಲ ಎಂದು ಅವರು ಸೋಮವಾರ ನುಡಿದರು.

ಅನುಭವಿ ಆಟಗಾರ ಫಾಫ್‌ ಡು ಪ್ಲೆಸಿಸ್‌ ಅವರು ಮೂರೂ ಮಾದರಿಯ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ), ಟೆಸ್ಟ್‌ ಮಾದರಿಗೆ ಹೊಸ ನಾಯಕನ ಹುಡುಕಾಟದಲ್ಲಿದೆ. ಕ್ವಿಂಟನ್‌ ಡಿ ಕಾಕ್ ಅವರು ಈಗಾಗಲೇ ಏಕದಿನ, ಟ್ವೆಂಟಿ–20 ಮಾದರಿಯ ಸಾರಥ್ಯ ವಹಿಸಿಕೊಂಡಿದ್ದಾರೆ.

‘ತಂಡದ ನಾಯಕತ್ವದ ವಿಚಾರಕ್ಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೊಂದು ಅವಕಾಶ. ನನ್ನ ಹೆಸರು ಜನರ ಬಾಯಲ್ಲಿ ಓಡಾಡುತ್ತಿದೆ. ಹೀಗಾಗಿ ನಾನು ಮಾತನಾಡಬೇಕಿದೆ. ನಾಯಕತ್ವ ವಹಿಸಿಕೊಳ್ಳುವ ಅವಕಾಶ ಸಿಕ್ಕರೆ ಖುಷಿಯಾಗುತ್ತದೆ’ ಎಂದು ಮರ್ಕರಮ್‌ ಹೇಳಿದ್ದನ್ನು ಸ್ಪೋರ್ಟ್ 24 ಸುದ್ದಿ ಸಂಸ್ಥೆ ವರದಿ ಮಾಡಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು