ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2025ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಭಾನುವಾರ) ಬಿಡುಗಡೆಗೊಳಿಸಿದೆ. ಈ ಸಂಬಂಧ ಸಂಪೂರ್ಣ ವಿವರವನ್ನು ಹಂಚಿಕೊಳ್ಳಲಾಗಿದೆ.

ಎಷ್ಟನೇ ಆವೃತ್ತಿ?

18

ಆರಂಭ, ಫೈನಲ್ ಯಾವಾಗ?

18ನೇ ಆವೃತ್ತಿಯ ಟೂರ್ನಿಯು ಮಾರ್ಚ್ 22ರಂದು ಆರಂಭವಾಗಲಿದ್ದು, ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ.

ಒಟ್ಟು ಎಷ್ಟು ಪಂದ್ಯಗಳು?

ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಿಗದಿಯಾಗಿವೆ.

ಡಬಲ್ ಹೆಡರ್ ಪಂದ್ಯಗಳ ವಿವರ:

12 ಡಬಲ್ ಹೆಡರ್ (ದಿನಕ್ಕೆ 2 ಪಂದ್ಯ) ಪಂದ್ಯಗಳು ಇರಲಿದೆ.

ಪಂದ್ಯ ಆರಂಭವಾಗುವ ಸಮಯ?

ಸಂಜೆಯ ಪಂದ್ಯ 3.30ಕ್ಕೆ ಮತ್ತು ರಾತ್ರಿಯ ಪಂದ್ಯಗಳು 7.30ಕ್ಕೆ ಆರಂಭವಾಗಲಿವೆ.

ಉದ್ಘಾಟನಾ ಪಂದ್ಯದಲ್ಲಿ ಯಾವ ತಂಡಗಳು ಮುಖಾಮುಖಿ?

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ. ಮಾರ್ಚ್ 22ರಂದು ಕೋಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ಈ ಪಂದ್ಯ ನಡೆಯಲಿದೆ.

ಪ್ಲೇ-ಆಫ್ ಪಂದ್ಯಗಳ ವಿವರ:

ಪ್ಲೇ-ಆಫ್ ಪಂದ್ಯಗಳಿಗೆ ಹೈದರಾಬಾದ್ ಮತ್ತು ಕೋಲ್ಕತ್ತ ತಾಣಗಳು ಆತಿಥ್ಯ ವಹಿಸಲಿವೆ. ಹೈದರಾಬಾದ್ನಲ್ಲಿ ಮೇ 20ರಂದು ಮೊದಲ ಕ್ವಾಲಿಫೈಯರ್ ಮತ್ತು ಮೇ 21ರಂದು ಎಲಿಮಿನೇಟರ್ ಪಂದ್ಯಗಳು ನಿಗದಿಯಾಗಿವೆ. ಮೇ 23ರಂದು ಕೋಲ್ಕತ್ತದಲ್ಲಿ ಎರಡನೇ ಕ್ವಾಲಿಫೈಯರ್ ನಡೆಯಲಿದೆ.

ಫೈನಲ್ ಎಲ್ಲಿ?

ಮೇ 25, ಭಾನುವಾರದಂದು ಕೋಲ್ಕತ್ತದ ಈಡನ್ ಗಾರ್ಡರ್ನ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಎಷ್ಟು ತಾಣಗಳು?

13 ತಾಣಗಳಲ್ಲಿ ಪಂದ್ಯ ನಡೆಯಲಿವೆ. 10 ಐಪಿಎಲ್ ತಂಡಗಳ ಪೈಕಿ ಮೂರು ತಂಡಗಳು ತನ್ನ ತವರು ಪಂದ್ಯಗಳನ್ನು ಎರಡು ಮೈದಾನಗಳಲ್ಲಿ ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ದೆಹಲಿಯ ಅರುಣ್ ಜೇಟ್ಲಿ ಹೊರತಾಗಿ ವಿಶಾಖಪಟ್ಟಣದಲ್ಲೂ ಹೋಮ್ ಪಂದ್ಯಗಳನ್ನು ಆಡಲಿದೆ. ಹಾಗೆಯೇ ರಾಜಸ್ಥಾನ ತಂಡವು ಜೈಪುರ ಹೊರತಾಗಿ ಗುವಾಹಟಿಯಲ್ಲೂ ಹೋಮ್ ಪಂದ್ಯಗಳನ್ನು ಆಡಲಿದೆ. ಇನ್ನು ಪಂಜಾಬ್ ಕಿಂಗ್ಸ್ ಚಂಡೀಗಢದ ಹೊರತಾಗಿ ಧರ್ಮಶಾಲಾದಲ್ಲೂ ಹೋಮ್ ಪಂದ್ಯವನ್ನು ಆಡಲಿದೆ.

ಭಾಗವಹಿಸುವ ತಂಡಗಳು:

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ ಇಂಡಿಯನ್ಸ್

ಕೋಲ್ಕತ್ತ ನೈಟ್ ರೈಡರ್ಸ್

ಸನ್ರೈಸರ್ಸ್ ಹೈದರಾಬಾದ್

ರಾಜಸ್ಥಾನ ರಾಯಲ್ಸ್

ಡೆಲ್ಲಿ ಕ್ಯಾಪಿಟಲ್ಸ್,

ಲಖನೌ ಸೂಪರ್ಜೈಂಟ್ಸ್

ಗುಜರಾತ್ ಟೈಟನ್ಸ್

ಪಂಜಾಬ್ ಕಿಂಗ್ಸ್

ಐಪಿಎಲ್ 2025 ಸಂಪೂರ್ಣ ವೇಳಾಪಟ್ಟಿ (ಚಿತ್ರಗಳಲ್ಲಿ)
.IPL 2025 | RCB ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.IPL 2025 | ಐಪಿಎಲ್ ವೇಳಾಪಟ್ಟಿ ಬಿಡುಗಡೆ; RCB vs KKR ಮೊದಲ ಫೈಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.