IPL 2022: ಮಗದೋರ್ವ ಡೆಲ್ಲಿ ಆಟಗಾರನಿಗೆ ಕೋವಿಡ್: ವರದಿ

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಗದೋರ್ವ ಆಟಗಾರನಿಗೆ ಕೋವಿಡ್ ದೃಢಪಟ್ಟಿದೆ ಎಂದು ವರದಿಯಾಗಿದೆ. ಇದರಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೇಲೆ ಆತಂಕ ಮಡುಗಟ್ಟಿದೆ.
ಇಂದು (ಬುಧವಾರ) ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಿಗದಿಯಾಗಿದೆ. ಈ ನಡುವೆ ಡೆಲ್ಲಿ ಪಾಳಯದಲ್ಲಿ ಮಗದೊಂದು ಕೋವಿಡ್ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಡೆಲ್ಲಿ ತಂಡದ ಐವರು ಸಿಬ್ಬಂದಿಗೆ ಕೋವಿಡ್: ಬುಧವಾರದ ಪಂದ್ಯ ಮುಂಬೈಗೆ ಸ್ಥಳಾಂತರ
'ಇಎಸ್ಪಿಎನ್ ಕ್ರಿಕ್ಇನ್ಫೋ' ವರದಿ ಪ್ರಕಾರ, ಬುಧವಾರ ಬೆಳಿಗ್ಗೆ ನಡೆಸಲಾದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ಡೆಲ್ಲಿ ತಂಡದ ಮಗದೋರ್ವ ವಿದೇಶಿ ಆಟಗಾರನಲ್ಲಿ ಸೋಂಕು ಪತ್ತೆಯಾಗಿದೆ.
A second overseas player has tested positive in the Delhi Capitals camp, putting a question mark once again on their match against Punjab Kings later this evening#IPL2022 pic.twitter.com/FBfsf3NuHk
— ESPNcricinfo (@ESPNcricinfo) April 20, 2022
ಪಂದ್ಯ ನಿಗದಿಯಂತೆ ನಡೆಯಲಿದೆ: ಬಿಸಿಸಿಐ
ಈ ನಡುವೆ ಆಟಗಾರರಿಗೆ ಎರಡು ಸುತ್ತಿನ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಡೆಲ್ಲಿ ಹಾಗೂ ಪಂಜಾಬ್ ನಡುವಣ ಪಂದ್ಯ ನಿಗದಿಯಂತೆ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
🚨 NEWS 🚨: Wankhede Stadium to host Delhi Capitals versus Rajasthan Royals on April 22. #TATAIPL
Match No. 32 involving Delhi Capitals and Punjab Kings scheduled today at Brabourne – CCI will go ahead as per the schedule.
More Details 🔽https://t.co/dlkJjGhguC
— IndianPremierLeague (@IPL) April 20, 2022
ಈ ಮೊದಲು ಮಿಚೆಲ್ ಮಾರ್ಷ್ ಸೇರಿದಂತೆ ಡೆಲ್ಲಿಯ ತಂಡದ ಐವರು ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಪಂದ್ಯವನ್ನು ಪುಣೆಯಿಂದ ಮುಂಬೈಗೆ ಸ್ಥಳಾಂತರಿಸಲಾಗಿತ್ತು.
ಡೆಲ್ಲಿ ತಂಡದ ಆಟಗಾರ ಮಿಚೆಲ್ ಮಾರ್ಷ್, ಫಿಸಿಯೊ ಪ್ಯಾಟ್ರಿಕ್ ಫರ್ಹಾಟ್, ಮಸಾಜ್ ತಜ್ಞ ಚೇತನ್ ಕುಮಾರ್, ವೈದ್ಯ ಅಭಿಜಿತ್ ಸಾಳ್ವಿ ಮತ್ತು ಸಾಮಾಜಿಕ ಜಾಲತಾಣ ನಿರ್ವಾಹಕ ತಂಡದ ಸದಸ್ಯ ಆಕಾಶ್ ಮಾನೆ ಅವರು ಸೋಂಕಿತರಾಗಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.