ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC ಗೆಲುವು | ಕೊಹ್ಲಿಗೆ ಸದಾ ನೆನಪಿರುವಂಥ ಪೋಸ್ಟ್ ಹಂಚಿಕೊಂಡ ಅನುಷ್ಕಾ

Published 30 ಜೂನ್ 2024, 7:41 IST
Last Updated 30 ಜೂನ್ 2024, 7:41 IST
ಅಕ್ಷರ ಗಾತ್ರ

ಮುಂಬೈ: ಭಾರತ ತಂಡ ಟಿ–20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಎಲ್ಲೆಡೆಯಿಂದ ಭಾವನಾತ್ಮಕ ಶುಭಾಶಯದ ಸಂದೇಶಗಳು ಬರುತ್ತಿವೆ. ಫೈನಲ್‌ನಲ್ಲಿ 76 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿಗೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.

ನಿಮ್ಮನ್ನು ನನ್ನ ಮನೆಯವರು ಎಂದು ಕರೆಯಲು ಆಭಾರಿಯಾಗಿದ್ದೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೃದಯ ಸ್ಪರ್ಶಿ ಪೋಸ್ಟ್ ಮಾಡಿದ್ದಾರೆ.

'ನಾನು ನಿಮ್ನನ್ನು ಪ್ರೀತಿಸುತ್ತೇನೆ. ನಿಮ್ಮನ್ನು ನನ್ನ ಮನೆಯವರು ಎಂದು ಕರೆಯಲು ಬಹಳ ಆಭಾರಿಯಾಗಿದ್ದೇನೆ’ಎಂದು ಕೈಯಲ್ಲಿ ಟ್ರೋಫಿ ಇರುವ ಕೊಹ್ಲಿಯ ಚಿತ್ರಕ್ಕೆ ಶೀರ್ಷಿಕೆ ಶೀರ್ಷಿಕೆ ನೀಡಿದ್ದಾರೆ.

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲೂ ಇದ್ದ ವಿರಾಟ್ ಕೊಹ್ಲಿ, ಟಿ–20 ವಿಶ್ವಕಪ್ ಫೈನಲ್‌ನಲ್ಲಿ ಸಮಯೊಚಿತ ಅರ್ಧಶತಕ( 58 ಎಸೆತಗಳಲ್ಲಿ 76) ರನ್ ಸಿಡಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ತಮ್ಮ ಆಟಕ್ಕೆ ಪಂದ್ರ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು, ಕೂಡಲೇ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ 3 ವರ್ಷದ ಮಗಳು ವಮಿಕಾ ಮತ್ತು 4 ತಿಂಗಳ ಮಗ ಅಕಾಯ್ ಜೊತೆ ಟೀಮ್ ಇಂಡಿಯಾಗೆ ಶುಭಾಶಯ ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ.

‘ವಿಶ್ವಕಪ್ ಗೆದ್ದ ಬಳಿಕ ಅಳುತ್ತಿದ್ದ ಆಟಗಾರರನ್ನು ಟಿವಿಯಲ್ಲಿ ನೋಡಿದ ಮಗಳು ವಮಿಕಾ, ಅವರನ್ನು ತಬ್ಬಿ ಸಂತೈಸಲು ಯಾರೂ ಇಲ್ಲವಲ್ಲ ಎಂದು ಚಿಂತೆಗೀಡಾಗಿದ್ದಳು.. ಆದರೆ, ಅವರನ್ನು 1.5 ಶತಕೋಟಿ ಜನರು ತಬ್ಬಿಕೊಂಡಿದ್ದಾರೆ ಎಂದು ಹೇಳಿದೆ. ಎಂತಹ ಅದ್ಭುತ ಗೆಲುವು ಮತ್ತು ಎಂತಹ ಸ್ಮರಣೀಯ ಸಾಧನೆ! ! ಚಾಂಪಿಯನ್ಸ್.. ನಿಮಗೆ ಅಭಿನಂದನೆಗಳು !!" ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT