ಸೋಮವಾರ, ಜೂನ್ 1, 2020
27 °C

Video | ಅನುಷ್ಕಾ ಬ್ಯಾಟಿಂಗ್..ವಿರಾಟ್ ಬೌಲಿಂಗ್.!

ಏಜೇನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಮನೆಯ ಅಂಗಳದಲ್ಲಿ ಕ್ರಿಕೆಟ್ ಆಡುವ ವಿಡಿಯೊವೊಂದು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ.

ಆದರೆ ಇಲ್ಲೊಂದು ಬದಲಾವಣೆ ಇದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಶ್ರೇಯಾಂಕದ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ ಕೊಹ್ಲಿ ಈ ವಿಡಿಯೊದಲ್ಲಿ ’ಅಂಡರ್ ಆರ್ಮ್‘ ಬೌಲಿಂಗ್ ಮಾಡುತ್ತಿದ್ದಾರೆ. ಅನುಷ್ಕಾ ಬ್ಯಾಟಿಂಗ್ ಮಾಡುತ್ತಿದ್ದಾರೆ!

ಮುಂಬೈನ ವರ್ಲಿಯಲ್ಲಿರುವ ವೈಭವೋಪೇತ ವಸತಿ ಸಮ್ಮುಚ್ಚಯದಲ್ಲಿ ನಾಲ್ಕು ವರ್ಷಗಳ ಹಿಂದೆ ವಿರಾಟ್ ಮತ್ತು ಅನುಷ್ಕಾ ಅವರು  ಫ್ಲ್ಯಾಟ್  ಖರೀದಿಸಿದ್ದರು. ಈ ಅಪಾರ್ಟ್‌ಮೆಂಟ್‌ನ ಟೆರೆಸ್ ಮೇಲೆ ಇರುವ ಆಟದ ಸ್ಥಳದಲ್ಲಿ ಪ್ರತಿದಿನವೂ ವಿರಾಟ್ ವ್ಯಾಯಾಮ ಮಾಡುತ್ತಿದ್ದಾರೆ.

ಇಲ್ಲಿರುವ ಹುಲ್ಲಿನಂಕಣದಲ್ಲಿ ತಾವು ಓಟದ ಅಭ್ಯಾಸ ಮಾಡುತ್ತಿರುವ ವಿಡಿಯೋಗಳನ್ನೂ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.  ಅವರ ವ್ಯಾಯಾಮಗಳು ಮುಗಿದ ನಂತರ ದಂಪತಿಯು ಕ್ರಿಕೆಟ್ ಆಡುವ ವಿಡಿಯೊ ಈಗ ಅಪಾರ ಮೆಚ್ಚುಗೆ ಗಳಿಸಿದೆ.  ಮಾನವ ಮಂಗಲಾನಿ ಎಂಬುವವರು ಈ ವಿಡಿಯೊವನ್ನು ಹಾಕಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದಾಗಿ ಮುಂಬೈ ಮಹಾನಗರಿಯು ತತ್ತರಿಸಿ ಹೋಗಿದೆ. ಲಾಕ್‌ಡೌನ್‌ನಿಂದಾಗಿ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಆದರೆ ಕ್ರೀಡಾಪಟುಗಳು ತಮ್ಮ ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸುವ ಒತ್ತಡವೂ ಇದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು